ಮೇ 13ರಂದು ರಾಜ್ಯ ವಿಧಾನಸಭಾ ಚುನಾವಣೆ ? : ಏಕಹಂತದಲ್ಲಿ ನಡೆಯಲಿದ್ಯಾ ಮತದಾನ ?

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಜೋರಾಗಿ ಸಾಗುತ್ತಿದೆ. ಈಗಾಗಲೆ ಚುನಾವಣಾ ಆಯೋಗ ಸಹ ಸಕಲ ಸಿದ್ದತೆ ಮಾಡಿಕೊಂಡಿದ್ದು, ಮಾರ್ಚ್ 23ರಂದು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೇ 7ರಿಂದ 13ರವರೆಗೆ ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲು ಆಯೋಗ ತಯಾರಿ ಮಾಡಿಕೊಂಡಿದ್ದು. ಮಾರ್ಚ್‌ 23ರಂದು ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯುಕ್ತರಾದ ಒ.ಪಿ ರಾವತ್ ರಾಜ್ಯಕ್ಕೆ ಭೇಟಿ ನೀಡಿ ಸಿದ್ದತೆಯ ಪರಿಶೀಲನೆ ನಡೆಸಿ, ಬಳಿಕ ದಿನಾಂಕ ಘೋಷಿಸಲಿದ್ದಾರೆ. ಮಾರ್ಚ್ 23ರಂದು ದಿನಾಂಕ ಘೋಷಣೆಯಾಗುವ ಬಗ್ಗೆ ನಿರೀಕ್ಷೆ ಇಡಲಾಗಿದೆ. ಮೇ ಎರಡನೇ ವಾರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com