JDS ಪರ ಪ್ರಚಾರದ ಕಣಕ್ಕಿಳಿದ ತೆಲುಗು ನಟ : ಪವನ್‌ ಕಲ್ಯಾಣ್‌ಗೆ ನಿಖಿಲ್‌ ಸಾಥ್‌

ಬೆಂಗಳೂರು : ತೆಲುಗು ನಟ ಪವನ್‌ ಕಲ್ಯಾಣ್‌ ಹಾಗೂ ಮಾಜಿ ಸಿಎಂ ಎಚ್‌ಡಿಕೆ ಪುತ್ರ ಚುನಾವಣಾ ಅಖಾಡಕ್ಕಿಳಿದಿದ್ದು, ಜೆಡಿಎಸ್‌ನ ಸ್ಟಾರ್‌ ಪ್ರಚಾರಕರಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ತೆಲುಗು ಭಾಷೆಯ ಜನ ಹೆಚ್ಚಿರುವ, ಅಥವಾ ಆಂಧ್ರ ಪ್ರದೇಶ, ತೆಲಂಗಾಣ ಪ್ರದೇಶಗಳಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪವನ್‌ ಕಲ್ಯಾಣ್‌ ಪ್ರಚಾರ ಮಾಡಲಿದ್ದು, ಇವರಿಗೆ ನಿಖಿಲ್‌ ಗೌಡ ಸಹ ಸಾಥ್ ನೀಡಲಿದ್ದಾರೆ.

ಈ ಹಿಂದೆ ನಿಖಿಲ್‌ ತಮ್ಮ ಜಾಗ್ವಾರ್‌ ಸಿನಿಮಾದ ಪ್ರಚಾರದ ವೇಳೆ ಪವನ್‌ ಕಲ್ಯಾಣ್ ಅವರನ್ನು ಸಂಪರ್ಕಿಸಿದ್ದರು. ಈಗ ಚುನಾವಣೆಗೆ ಅವರನ್ನು ಬಳಸಿಕೊಳ್ಳುತ್ತಿದ್ದು, ಇಬ್ಬರ ನಡುವಿನ ಸ್ನೇಹಕ್ಕೆ ಇದು ಸಾಕ್ಷಿಯಾಗಿದೆ. ಅಲ್ಲದೆ ಎಚ್‌ಡಿಕೆ ಸಹ ಪವನ್‌ ಕಲ್ಯಾಣ್ ಜೊತೆ ಅನೇಕ ಬಾರಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com