ಯುಗಾದಿ ದಿನ ಈ ಕೆಲಸಗಳನ್ನು ಮಾಡಿ, ಆರೋಗ್ಯದ ಜೊತೆ ಐಶ್ವರ್ಯವೂ ನಿಮ್ಮದಾಗುತ್ತದೆ !

ಯುಗಾದಿ ಹಬ್ಬ ಹತ್ತಿರವಾಗುತ್ತಿದೆ. ಯುಗಾದಿ ಎಂದರೆ ಹಿಂದೂಗಳಿಗೆ ಹೊಸವರ್ಷ ಆರಂಭವಾಗುವ ದಿನ. ಆದ್ದರಿಂದ ವರ್ಷದ ಮೊದಲ ದಿನವಾದ ಕಾರಣ ಇದನ್ನು ಯುಗಾದಿ ಅಥವಾ ಉಗಾದಿ ಎಂದು ಕರೆಯಲಾಗುತ್ತದೆ.
ನೀರಿನಲ್ಲಿ ಗಂಗಾದೇವಿ, ತೈಲದಲ್ಲಿ ಲಕ್ಷ್ಮೀದೇವಿ ಇರುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಯುಗಾದಿಯ ದಿನ ಒಬ್ಬೊಬ್ಬ ದೇವರು ಒಂದೊಂದು ಪದಾರ್ಥಗಳಲ್ಲಿ ಇರುತ್ತಾರೆ. ಇದರಿಂದಾಗಿ ಯುಗಾದಿ ದಿನ ಬೆಳಗ್ಗೆ ಎಳ್ಳೆಣ್ಣೆ ತೈಲವನ್ನು ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಈ ರೀತಿ ಮಾಡಿದವರಿಗೆ ಅಷ್ಟೈಶ್ವರ್ಯಗಳು ಸಿಗುತ್ತವೆ. ಜೊತೆಗೆ ಆಯುರಾರೋಗ್ಯವೂ ಚೆನ್ನಾಗಿರುತ್ತದೆ. ಆದ್ದರಿಂದ ಯುಗಾದಿ ದಿನ ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಅಭ್ಯಂಜನ ಮಾಡುವುದನ್ನು ಮರೆಯಬೇಡಿ.


ಈ ಕಾಲದಲ್ಲಿ ದೇಹದಲ್ಲಿ ಅಮ್ಮ ಆಗುತ್ತದೆ. ಇತರೆ ಸಾಂಕ್ರಾಮಿಕ ರೋಗಗಳೂ ಹೆಚ್ಚಾಗಿ ಬರುತ್ತವೆ. ಆದ ಕಾರಣ ಈ ಸಮಯವನ್ನು ಯಮದ್ರಂಸ್ಥರು ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಯಮ ತನ್ನ ಕೋರೆಗಳನ್ನು ಹೊರಹಾಕಿ ಜನರನ್ನು ನಾಶಮಾಡುತ್ತಾನೆ ಎಂದರ್ಥ. ಆದ್ದರಿಂದ ಬಹಳಷ್ಟು ಮಂದಿ ರೋಗಗಳಿಗೆ ಬಲಿಯಾಗುತ್ತಾರೆ. ಅದನ್ನು ನಿವಾರಿಸಲು ಬೇವು ಬೆಲ್ಲ ಅಗತ್ಯ ಆದ್ದರಿಂದ ಯುಗಾದಿಯಂದು ಬೇವು ಬೆಲ್ಲ ತಿನ್ನುತ್ತಾರೆ.
ಯುಗಾದಿಯ ಬೇವು ಬೆಲ್ಲ ಆರೋಗ್ಯಕ್ಕೆ ದಿವ್ಯೌಷಧ. ಯುಗಾದಿಯಿಂದ ರಾಮನವಮಿವರೆಗೂ ಪ್ರತೀದಿನ ಬೇವು ಬೆಲ್ಲ ಸೇವಿಸಬೇಕಂತೆ. ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಹೊಟ್ಟೆಯಲ್ಲಿನ ಜಂತುಹುಳಗಳ ನಾಶವಾಗುತ್ತದೆ. ಮಾವಿನ ಎಳೆ ಆ್ಯಂಟಿ ವೈರಸ್‌ ಗುಣಗಳನ್ನು ಹೊಂದಿದ್ದು, ಇದರಿಂದ ಜ್ವರ, ವಾತ, ಪಿತ್ತ, ಕಫದಂತಹ ಸಮಸ್ಯೆ ಬರುವುದಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com