Football : ISL ಫೈನಲ್ : ಟ್ರೋಫಿ ಕನಸಿನಲ್ಲಿ ಬೆಂಗಳೂರು ತಂಡ

ಬೆಂಗಳೂರಿನ ಕಂಠೀರವ ಅಂಗಳದಲ್ಲಿ ಇಂದು ಇಂಡಿಯನ್​ ಸೂಪರ್​ ಲೀಗ್​ (ISL) ಟೂರ್ನಿಯ ಫೈನಲ್​ ಪಂದ್ಯ ನಡೆಯಲಿದ್ದು, ಮೈದಾನ ಸಿದ್ಧ ಗೊಂಡಿದೆ. ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಬೆಂಗಳೂರು ತಂಡ, ಐ-ಲೀಗ್​​​ ನಂತೆ ಈ ಟೂರ್ನಿಯಲ್ಲಿ ಪಾದಾರ್ಪಣೆ ಟೂರ್ನಿಯಲ್ಲಿ ಪ್ರಶಸ್ತಿ ಎತ್ತುವ ಕನಸಿನಲ್ಲಿದೆ.
ಟೂರ್ನಿಯಲ್ಲಿ ಆಡಿರುವ 18 ಪಂದ್ಯಗಳಲ್ಲಿ 3 ರಲ್ಲಿ ಜಯ, 1 ಡ್ರಾ, 4 ಸೋಲು ಕಂಡಿದ್ದ ಬೆಂಗಳೂರು ತಂಡ 40 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಇನ್ನು ಚೆನ್ನೈಯಿನ್ ತಂಡ 18 ಪಂದ್ಯಗಳಲ್ಲಿ 9 ಗೆಲುವು 5 ಡ್ರಾ, 4 ಸೋಲು ಕಂಡಿದ್ದು, ಎರಡನೇ ಸ್ಥಾನದಲ್ಲಿದೆ. ಇನ್ನು ಚೆನ್ನೈಯಿನ್ ತಂಡಕ್ಕೆ ಹೋಲಿಸಿದ್ರೆ, ಬೆಂಗಳೂರು ತಂಡ ಬಲಾಢ್ಯವಾಗಿದೆ. ಬಿಎಫ್​​ಸಿ ತಂಡದ ನಾಯಕ ಸುನಿಲ್​ ಛೆಟ್ರಿ ಟೂರ್ನಿಯಲ್ಲಿ 13 ಗೋಲು ಬಾರಿಸಿ ಮಿಂಚುತ್ತಿದ್ದಾರೆ.

ಸಂಘಟಿತ ಆಟದ ಮೇಲೆ ಬಲವನ್ನು ಇಟ್ಟುಕೊಂಡಿರುವ ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ 4-2-3-1ರ ಯೋಜನೆಯೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. AFC ಕಪ್​ ಟೂರ್ನಿಯ ಫೈನಲ್​​ಗೆ ಕಳೆದ ಬಾರಿ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿತ್ತು. ಅಲ್ಲದೆ ಈ ಹಂತಕ್ಕೆ ಅರ್ಹತೆ ಪಡೆದ ಭಾರತದ ಮೊದಲ ತಂಡ ಎಂಬ ಹೆಗ್ಗಳಿಕೆ ಬೆಂಗಳೂರು ತಂಡದ್ದಾಗಿದೆ.

ಐಲೀಗ್​​ನಲ್ಲಿ ಮೂರು ಬಾರಿ ಪ್ರಶಸ್ತಿಗೆ ಮುತ್ತಿಟ್ಟಿರುವ ಛೆಟ್ರಿ ಪಡೆ ನವ ಇತಿಹಾಸ ನಿರ್ಮಿಸುವ ಕನಸಿನಲ್ಲಿದೆ. ಬೆಂಗಳೂರು ವಿರುದ್ಧ ಲೀಗ್​​ ಹಂತದ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಚೆನ್ನೈಯಿನ್​ ತಂಡ, ಗೆಲುವಿನ ವಿಶ್ವಾಸದಲ್ಲಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡೋ ಪ್ಲಾನ್​ ಬಿಎಫ್​ ಸಿ ತಂಡದ್ದಾಗಿದೆ. ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ 4-2-3-1ರ ಯೋಜನೆಯೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 

Leave a Reply

Your email address will not be published.

Social Media Auto Publish Powered By : XYZScripts.com