ವೀರಶೈವರಿಗೆ ಧೈರ್ಯವಿದ್ದರೆ ಬೇರೆ ಧರ್ಮ ಮಾಡಿಕೊಳ್ಳಲಿ : ಮಾತೆ ಮಹಾದೇವಿ

ಹುಬ್ಬಳ್ಳಿ: ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಲಿಂಗಾಯತಕ್ಕಿಂತ ಸಣ್ಣ ಧರ್ಮಗಳಿಗೆ ಮಾನ್ಯತೆ ಸಿಕ್ಕಿದೆ. ಇದೇ ರೀತಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕು ಎಂದು ಮಾತೆ ಮಹಾದೇವಿ ಹೇಳಿದ್ದಾರೆ.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಒತ್ತಾಯಿಸಿರುವ ಇವರು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆ ಅಲ್ಲ.
ಲಿಂಗಾಯತ ಧರ್ಮ 12 ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಸ್ಥಾಪಿತವಾದ ಧರ್ಮ. ನಾಳೆ ಬೆಳಿಗ್ಗೆ ಬೆಂಗಳೂರಿನ ಟೌನ್ ಹಾಲ್ ಎದುರು ಸತ್ಯಾಗ್ರಹ ಮಾಡಲಾಗುತ್ತದೆ. ತಜ್ಞರ ವರದಿಯನ್ನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ, ಶಾಮನೂರ ಶಿವಶಂಕರಪ್ಪ ಹತ್ತಿರ ಯಾವುದೇ ದಾಖಲೆಗಳಿಲ್ಲ.  ಕೆಲವು ಸ್ವಾಮಿಗಳು ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಲಿಂಗ ಕಟ್ಟಿಕೊಂಡವರು ಎಲ್ಲರೂ ಲಿಂಗಾಯತರು, ವೀರಶೈವರು ಅಲ್ಲ. ವೀರಶೈವದ ಬಗ್ಗೆ ದಾಖಲೆಗಳಿದ್ದರೆ ಮತ್ತು ಅವರಿಗೆ ಧೈರ್ಯ ಇದ್ದರೆ ಅವರು ವೀರಶೈವ ಧರ್ಮ ಮಾಡಿಕೊಳ್ಳಲಿ. ಲಿಂಗಾಯತ ಧರ್ಮದಲ್ಲಿ ವೀರಶೈವರು ಬರುವುದು ಸರಿಯಲ್ಲ. ಆರ್‌ಎಸ್‌ಎಸ್‌ ನವರಿಗೆ ರಾಷ್ಟಾಭಿಮಾನಿ ಸಂಸ್ಥೆ ಆಗಿದ್ದರೆ ಈ ದೇಶದಲ್ಲಿ ಹುಟ್ಟಿರುವ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡಬೇಕು.
ಕೇವಲ ರಾಮ ಜನ್ಮ ಭೂಮಿ ಬಿಡುಗಡೆಗೆ ಮಾತ್ರ ಹೋರಾಡದೆ ಲಿಂಗಾಯತ ಧರ್ಮದ, ಧರ್ಮಿಯರ ಹಿತಕ್ಕೂ ಪ್ರಯತ್ನಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಧೃಡ ನಿರ್ಧಾರವನ್ನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.