T20 ಪಂದ್ಯದ ವೇಳೆ ಮಾತಿನ ಚಕಮಕಿ : ಡ್ರೆಸಿಂಗ್ ರೂಮ್ ಗಾಜು ಒಡೆದರೇ ಬಾಂಗ್ಲಾ ಕ್ರಿಕೆಟರ್ಸ್.?

ಕೋಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಿದಾಹಾಸ್ ಟಿ20 ತ್ರಿಕೋನ ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2 ವಿಕೆಟ್ ಜಯ ಗಳಿಸಿದ ಬಾಂಗ್ಲಾದೇಶ ಫೈನಲ್ ತಲುಪಿದೆ. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯ ತಂಡದ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

Image result for sri lanka fight bangladesh players nidahas

ಕೊನೆಯ ಓವರಿನಲ್ಲಿ ಬಾಂಗ್ಲಾದೇಶಕ್ಕೆ ಗೆಲ್ಲಲು 12 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲ್ ಮಾಡಿದ ಲಂಕಾ ಬೌಲರ್ ಇಸುರು ಉಡಾನಾ 2 ಬೌನ್ಸರ್ ಗಳನ್ನು ಎಸೆದರು. ಇಸುರು ಉಡಾನಾ ಎಸೆತವನ್ನು ‘ ನೋ ಬಾಲ್ ‘ ನೀಡಬೇಕೆಂದು ಬಾಂಗ್ಲಾ ಆಟಗಾರರು ಅಂಪೈರ್ ಗೆ ಆಗ್ರಹಿಸಿದರು. ಆದರೆ ಅಂಪೈರ್ ‘ ನೋ ಬಾಲ್ ‘ ನೀಡದಿದ್ದಾಗ ಬಾಂಗ್ಲಾ ಆಟಗಾರರಲ್ಲಿ ಅಸಮಾಧಾನ ಮೂಡಿಸಿತ್ತು.

Image result for isuru udana no ball bangladesh

ಪ್ರಬಲ ಹೋರಾಟ ಪ್ರದರ್ಶಿಸಿದ ಬಾಂಗ್ಲಾದೇಶ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಗುರಿಯನ್ನು ತಲುಪಿ 2 ವಿಕೆಟ್ ಜಯ ಗಳಿಸಿತು. ಪಂದ್ಯ ಮುಗಿದ ನಂತರ ಬಾಂಗ್ಲಾ ಆಟಗಾರರು ಇದ್ದ ಡ್ರೆಸಿಂಗ್ ರೂಮಿನ ಕಿಟಕಿ ಗಾಜು ಪುಡಿಪುಡಿಯಾಗಿದೆ. ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಈ ಕೃತ್ಯ ಮಾಡಿದವರು ಯಾರೆಂದು ಪತ್ತೆ ಮಾಡುವಂತೆ ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗೆ ಐಸಿಸಿ ಸೂಚಿಸಿದೆ.

Image result for dressing room glass break cricket colombo

Image result for dressing room glass break cricket colombo

Leave a Reply

Your email address will not be published.

Social Media Auto Publish Powered By : XYZScripts.com