ಚೀನಾದ ಆಜೀವ ಪರ್ಯಂತ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕ್ಸಿ ಜಿನ್‌ಪಿಂಗ್‌

ಬೀಜಿಂಗ್‌ : ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‌ ಪಿಂಗ್‌ ಮರು ಆಯ್ಕೆಯಾಗಿದ್ದು, ಅವರು ಬದುಕಿರುವವರೆಗೂ ಚೀನಾದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾವನ್ನು ಆರ್ಥಿಕ ಮತ್ತು ಮಿಿಟರಿ ಸೂಪರ್‌ ಪವರ್‌ ಆಗಿ ಬದಲಿಸಿದ ಹಿನ್ನೆಲೆಯಲ್ಲಿ ಕ್ಸಿ ಜಿನ್‌ ಪಿಂಗ್‌ಗೆ ಕಳೆದ ಕೆಲ ದಿನಗಳ ಹಿಂದೆ ಸರ್ವಾಧಿಕಾರ ನೀಡಲಾಗಿತ್ತು. ಈ ಬಗಗೆ ಚೀನಾದ ಸಂಸತ್ತಿನಲ್ಲೂ ನಿರ್ದಾರ ಕೈ ಗೊಳ್ಳಲಾಗಿದ್ದು, ಸರ್ವಾಧಿಕಾರ ನೀಡುವ ಸಲುವಾಗಿ ಸಂವಿಧಾನ ತಿದ್ದುಪಡಿ ಮಾಡುವ ನಿರ್ಣಯಕ್ಕೆ ಸಂಸತ್ತಿನಲ್ಲಿ ಅನುಮೋದನೆಯೂ ಸಿಕ್ಕಿತ್ತು. ಈ ನಿರ್ಣಯದ ವಿರುದ್ದ ಕೇವಲ ಇಬ್ಬರು ಮಾತ್ರ ಮತ ಚಲಾಯಿಸಿದ್ದರು.

ಈ ಹಿಂದೆ ಚೀನಾದಲ್ಲಿ ಒಬ್ಬ ಅಧ್ಯಕ್ಷ ಕೇವಲ 2 ಬಾರಿ ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದಿತ್ತು. ಅಲ್ಲದೆ 2 ಬಾರಿ ಅಧ್ಯಕ್ಷರಾಗುವ ಅವಕಾಶ ನೀಡಲಾಗಿತ್ತು. ಆದರೆ ಇನ್ನುಮುಂದೆ ಚೀನಾದಲ್ಲಿ ಕ್ಸಿ ಜಿನ್‌ ಪಿಂಗ್‌ ಆಡಳಿತ ಮಾತ್ರ ನಡೆಯಲಿದೆ.

Leave a Reply

Your email address will not be published.