ತಪ್ಪು ಕೆಲಸ ಮಾಡಿಸ್ತಿದ್ದ ಮಾಲೀಕ : ಕೆಲಸ ಬಿಡಲು ಹೋದ ಮಹಿಳೆಗೆ ಈತ ಮಾಡಿದ್ದೇನು ?

ಬೆಂಗಳೂರು : ದೇವನಹಳ್ಳಿಯ ಪ್ರತಿಷ್ಠಿಕ ಆಕಾಶ್‌ ಮೆಡಿಕಲ್ ಇನ್ಸ್ಟಿಟ್ಯೂಟ್‌ ಮಾಲೀಕ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ್ದು ಈ ಸಂಬಂಧ ಮಾಲೀಕನ ವಿರುದ್ದ ಎಫ್‌ಐಆರ್‌ ದಾಖಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿದಾತನನ್ನು ಮುನಿರಾಜ್‌ ಎಂದು ಹೆಸರಿಸಲಾಗಿದೆ. ಅಲ್ಲದೆ ಈತ ಮಹಿಳೆಗೆ ಪ್ರಾಣಬೆದರಿಕೆಯೊಡ್ಡಿರುವುದಾಗಿಯೂ ತಿಳಿದುಬಂದಿದೆ. ತನ್ನದೇ ಸಂಸ್ಥೆಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ಮೇಲೆ ಮುನಿರಾಜು ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಆಕೆಗೆ ಜೀವಬೆದರಿಕೆಯನ್ನೂ ಹಾಕಿದ್ದ. ಮುನಿರಾಜು, ಆತನ ಪತ್ನಿ ಪುಷ್ಪಾ, ಹಾಗೂ ಆತನ ಸಹಾಯಕಿ ವೀಣಾ ಎಂಬುವವರ ಮೇಲೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

ವೈದ್ಯಕೀಯ ಸಂಸ್ಥೆಯಲ್ಲಿ ಎಂಸಿಐ ನಿಯಮಾವಳಿಗಳ ಪ್ರಕಾರ ರೋಗಿಗಳು ಇರಲಿಲ್ಲ. ಆದರೆ ಎಂಸಿಐ ಇನ್ಸ್‌ಪೆಕ್ಷನ್‌ ವೇಳೆ ನಕಲಿ ರೋಗಿಗಳನ್ನು ಆಸ್ಪತ್ರೆಗೆ ಕರೆಸಲಾಗುತ್ತಿತ್ತು. ಈ ಕೆಲಸವನ್ನು ಸಂತ್ರಸ್ತೆ ಮಾಲೀಕರ ಸೂಚನೆಯಂತೆ ಮಾಡುತ್ತಿದ್ದರು. ಬಳಿಕ ಇದು ತಪ್ಪೆಂದು ಗೊತ್ತಾಗಿ ಕೆಲಸ ಬಿಡಲು ಮುಂದಾಗಿದ್ದರಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ಮುನಿರಾಜು ಹಾಗೂ ಆತನ ಪತ್ನಿ ನಾಪತ್ತೆಯಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com