ಸುಪ್ರೀಂಕೋರ್ಟ್‌ನಲ್ಲೂ ನಲಪಾಡ್‌ಗೆ ಜಾಮೀನು ಸಿಗದಿರಲು ಹೊಸ ಪ್ಲಾನ್‌ ಮಾಡಿದ CCB ?

ಬೆಂಗಳೂರು : ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಈಗಾಗಲೇ ಹೈಕೋರ್ಟ್‌ನಲ್ಲೂ ಜಾಮೀನು ನೀಡಲು ನಿರಾಕರಿಸಿರುವ ಬೆನ್ನಲ್ಲೇ ನಲಪಾಡ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಆದರೆ ಅಲ್ಲೂ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಪೊಲೀಸರು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಂದೆಡೆ ನಲಪಾಡ್‌ ಜೈಲಿನಲ್ಲಿರಲಾಗದೆ ಹೊರಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದರೆ, ಆತನಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಪ್ರಯತ್ನಿಸುತ್ತಿದೆಯಂತೆ. ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಆದೇಶ ನೀಡುವ  ಮೊದಲು ಸಿಸಿಬಿ ಅಭಿಪ್ರಾಯ ಕೇಳಿ ಎಂದು ಸುಪ್ರೀಂಕೋರ್ಟ್‌ಗೆ ಸಿಸಿಬಿ ಅಧಿಕಾರಿಗಳು ಕೆವಿಯಟ್‌ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಮಾರ್ಚ್‌ 19ರಂದು ಕೆವಿಯಟ್ ಸಲ್ಲಿಸಲು ನಿರ್ಧರಿಸಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡುವ ಮುನ್ನ ನಮ್ಮ ವಾದ ಆಲಿಸುವಂತೆ ಸಿಸಿಬಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಿದೆ.

Leave a Reply

Your email address will not be published.

Social Media Auto Publish Powered By : XYZScripts.com