All England Open : ಸೆಮಿ ಫೈನಲ್‍ಗೆ ಪಿ.ವಿ ಸಿಂಧು, ನಿರಾಸೆ ಮೂಡಿಸಿದ ಪ್ರಣಯ್

ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಓಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಭಾರತದ ಪಿ.ವಿ ಸಿಂಧು ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ಬರ್ಮಿಂಗ್ ಹ್ಯಾಮ್ ಅರೆನಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ದೇಶದ ಆಟಗಾರ್ತಿ ನೊಜೊಮಿ ಓಕುಹಾರಾ ಅವರ ವಿರುದ್ಧ ಸಿಂಧು 20-22, 21-18, 21-18 ಪಾಯಿಂಟ್ ಗಳಿಂದ ಜಯ ಗಳಿಸಿದರು.

ತೀವ್ರ ಸೆಣಸಾಟದಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ಪಂದ್ಯ 1 ಗಂಟೆ 24 ನಿಮಿಷ ನಡೆಯಿತು. ಕಠಿಣ ಹೋರಾಟ ಪ್ರದರ್ಶಿಸಿದ ಸಿಂಧು ಕಳೆದ ಬಾರಿಯ ಚಾಂಪಿಯನ್ ಕೂಡ ಆಗಿರುವ ನೊಜೊಮಿ ಓಕುಹಾರಾ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಎಚ್.ಎಸ್ ಪ್ರಣಯ್ ನಿರಾಸೆ ಮೂಡಿಸಿದರು. ಚೀನಾದ ಹುವಾಂಗ್ ಯುಕ್ಸಿಯಾಂಗ್ ಅವರ ವಿರುದ್ಧ 22-20,16-21,21-23 ಪಾಯಿಂಟ್ ಗಳಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com