World Sleep Day : ನಿದ್ದೆ ಮಾಡುವುದರಿಂದ ಆಗುವ 10 ಅದ್ಭುತ ಲಾಭಗಳು..!

ದಿನವಿಡೀ ಕೆಲಸ ಮಾಡಿ ಆಯಾಸಗೊಂಡಿರುವ ನಮ್ಮ ದೇಹಕ್ಕೆ ವಿಶ್ರಾಂತಿ ನೀಡಿ, ಉತ್ಸಾಹ, ಚೈತನ್ಯವನ್ನು ಮರಳಿ ಪಡೆಯಲು ರಾತ್ರಿ ಹೊತ್ತು ಸುಖವಾದ ನಿದ್ದೆ ಮಾಡುವುದು ಅತ್ಯಗತ್ಯವಾಗಿದೆ. ಬರೀ ನಮ್ಮ ದೇಹಕ್ಕೆ ಉಂಟಾಗಿರುವ ದಣಿವನ್ನು ಪರಿಹರಿಸಲು ಮಾತ್ರವಲ್ಲ, ನಿದ್ದೆಯಿಂದ ಇನ್ನೂ ಹಲವಾರು ಉಪಯೋಗಗಳಿವೆ.

  • ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.
  • ಸುಖವಾದ ನಿದ್ದೆಯಿಂದ ನಮ್ಮ ಜ್ಞಾಪಕ ಶಕ್ತಿ ಉತ್ತಮ ಗೊಳ್ಳುತ್ತದೆ.

Image result for sleeping girl

  • ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.
  • ನಮ್ಮ ದೇಹದ ತೂಕದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕರಿಸುತ್ತದೆ.

Related image

  • ಮಾನಸಿಕ ಶಾಂತಿ ಹಾಗೂ ಚಿತ್ತ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಿದ್ದೆ ಸಹಾಯ ಮಾಡುತ್ತದೆ.
  • ಡಯಾಬಿಟೀಸ್ (ಸಕ್ಕರೆ ರೋಗ) ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ನಿದ್ದೆ ಪ್ರಮುಖ ಪಾತ್ರ ವಹಿಸುತ್ತದೆ.

Image result for sleeping girl

  • ದೇಹದ ಯಾವುದೇ ಭಾಗದಲ್ಲಿ ಪೆಟ್ಟಾಗಿ ನೋವುಂಟಾಗುತ್ತಿದ್ದರೆ, ನಿದ್ದೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
  • ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿ, ದಿನವಿಡೀ ಕ್ರಿಯಾಶೀಲರಾಗಿರುವಂತೆ ಮಾಡುವಲ್ಲಿ ಸಹಕರಿಸುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com