ಚಲಿಸುತ್ತಿದ್ದ ಕಾರ್‌ನಲ್ಲೇ ಮಹಿಳೆಯರ ರೇಪ್‌ ಮಾಡಿದ ಕಾಮುಕರು ಬಳಿಕ ಮಾಡಿದ್ದೇನು ?

ಲಖನೌ : ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯರಿಬ್ಬರು ಫರೂಕಾಬ್‌ದ್‌ನ ಕಮಾಲ್‌ ಗಂಜ್‌ ಪ್ರದೇಶದವರಾಗಿದ್ದು, ಔಷಧಿ ತೆಗೆದುಕೊಂಡು ಬರಲು ಲಖನೌಗೆ ಹೋಗಿದ್ದರು. ಬಳಿಕ ಔಷಧಿ ಕೊಂಡು ಕಮಾಲ್‌ಗಂಜ್ ಪ್ರದೇಶಕ್ಕೆ ವಾಪಸ್ಸಾಗುತ್ತಿದ್ದ ವೇಳೆ, ಅದೇ ಗ್ರಾಮದ ಯುವಕರು ಕಾರಿನಲ್ಲಿ ಡ್ರಾಪ್‌ ಕೊಡುವುದಾಗಿ ಹೇಳಿದ್ದಾರೆ. ಕಾರು ಹತ್ತಿದ ಮಹಿಳೆಯರ ಮೇಲೆ ಯುವಕರು ಅತ್ಯಾಚಾರ ನಡೆಸಿದ್ದಾರೆ.


ಅತ್ಯಾಚಾರವೆಸಗಿದ ಬಳಿಕ ಮಹಿಳೆಯರನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ. ಬಳಿಕ ಮಹಿಳೆಯರು ಸ್ಥಳೀಯರ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com