ಇನ್ನೂ ಬಂದಿಲ್ಲ ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್‌ : ಲೇಟಾಗ್ತಿರೋದಕ್ಕೆ ಅಮಿತ್ ಶಾ ಗರಂ ?

ಶಿವಮೊಗ್ಗ : 5 ಗಂಟೆ 50 ನಿಮಿಷವಾದರೂ ಇನ್ನೂ ಯಡಿಯೂರಪ್ಪ ಅವರ ಬ್ರೇಕಿಂಗ್‌ ನ್ಯೂಸ್ ಹೊರಬಂದಿಲ್ಲ. ಯಡಿಯೂರಪ್ಪ ಅವರು ಬ್ರೇಕಿಂಗ್‌ ನ್ಯೂಸ್ ಕೊಡುತ್ತಾರೆ ಎಂದು ಶಿವಮೊಗ್ಗದ ವಿನೋಬನಗರದಲ್ಲಿರುವ ಅವರ ನಿವಾಸದ ಮುಂದೆ ಬೆಂಬಲಿಗರು ಕಾದು ಕುಳಿತಿದ್ದು, ಯಡಿಯೂರಪ್ಪ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಮಾಜಿ ಸಿಎಂ ಯಡಿಯೂರಪ್ಪ ಶುಕ್ರವಾರ ಸಂಜೆ 5 ಗಂಟೆಗೆ ಬಿಗ್‌ ಬ್ರೇಕಿಂಗ್‌ ನ್ಯೂಸ್‌ ನೀಡುವುದಾಗಿ ಟ್ವೀಟ್‌ ಮಾಡಿದ್ದರು. ಆದರೆ ಇಷ್ಟು ಹೊತ್ತಾದರೂ ಬಿಎಸ್‌ವೈ ಬ್ರೇಕಿಂಗ್‌ ನ್ಯೂಸ್‌ ನೀಡದ ಹಿನ್ನೆಲೆಯಲ್ಲಿ ಹೈ ಕಮಾಂಡ್‌ ಸಹ ಗರಂ ಆಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಅಮಿತ್ ಶಾ ಬಿಎಸ್‌ವೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಿ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಬಿಎಸ್‌ವೈ ವಿರುದ್ಧ ಟ್ರೋಲ್‌ ಮಾಡಲು ಪ್ರಾರಂಭಿಸಿದ್ದಾರೆ.
ಮತ್ತೊಂದೆಡೆ ತಾಂತ್ರಿಕ ದೋಷದಿಂದ ಬ್ರೇಕಿಂಗ್‌ ನ್ಯೂಸ್‌ ನೀಡುವುದು ತಡವಾಗುತ್ತಿರುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published.