ನಟ ಸಾರ್ವಭೌಮನಾದ ಪವರ್ ಸ್ಟಾರ್‌ : ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ಅಪ್ಪು

ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್ ಅಭಿನಯದ ಮುಂದಿನ ಸಿನಿಮಾದ ಶೀರ್ಷಿಕೆ ಅಂತಿಮವಾಗಿದೆ. ಪುನೀತ್‌ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಿನಿಮಾಗೆ ನಟಸಾರ್ವಭೌಮ ಎಂದು ಹೆಸರಿಡಲಾಗಿದೆ.


ನಟ ಸಾರ್ವಭೌಮ ಸಿನಿಮಾದ ಪೋಸ್ಟರ್‌ನಲ್ಲಿ ಪುನೀತ್‌ ಕ್ಯಾಮರಾ ಹಿಡಿದು ಪೋಸ್ ನೀಡಿದ್ದಾರೆ. ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದು, ಈಗಾಗಲೆ ಸಿನಿಮಾದ ಶೂಟಿಂಗ್ ಸಹ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.
ನೆಚ್ಚಿನ ನಟ ಪವರ್‌ಸ್ಟಾರ್‌ರನ್ನು ನಟಸೌರ್ವಭೌಮನಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಈ ಸಿನಿಮಾಗೆ ಹೇರ್‌ ಸ್ಟೈಲ್‌ ಬದಲಿಸಿಕೊಂಡಿದ್ದಾರೆ.
ನಾಳೆ ಪುನೀತ್‌ ಹುಟ್ಟಹಬ್ಬವಿದ್ದು, ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇಂದು ರಾತ್ರಿ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com