ರಷ್ಯಾ ವಿಮಾನ ನಿಲ್ದಾಣದಲ್ಲಿ ಉದುರಿತು ಕೋಟ್ಯಂತರ ಮೌಲ್ಯದ ಟನ್‌ಗಟ್ಟಲೆ ಚಿನ್ನ

ಮಾಸ್ಕೋ : ರಷ್ಯಾದ ವಿಮಾನ ನಿಲ್ದಾಣವೊಂದರಲ್ಲಿ ಚಿನ್ನ, ವಜ್ರ ಹಾಗೂ ಪ್ಲಾಟಿನಂನ ಮಳೆ ಸುರಿದಿದೆ. ಆದರೆ ಇದು ಸುರಿದಿದ್ದು ವಿಮಾನದಿಂದ. ಹೌದು ವಿಮಾನ ಸಿಬ್ಬಂದಿಯ ಯಡವಟ್ಟಿನಿಂದಾಗಿ ವಿಮಾನದಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ಬೆಲೆಯ ಚಿನ್ನ, ವಜ್ರ, ಪ್ಲಾಟಿನಂ ರನ್‌ ವೇ ತುಂಬೆಲ್ಲಾ ಬಿದ್ದಿರುವ ಘಟನೆ ನಡೆದಿದೆ.
ರಷ್ಯಾದ ಯಾಕುಟ್ಸ್ಕ್‌ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಚಿನ್ನ, ವಜ್ರ, ಪ್ಲಾಟಿನಂನ್ನು ವಿಮಾನವೊಂದರಲ್ಲಿ ಸಾಗಿಸಲಾಗುತ್ತಿತ್ತು. ವಿಮಾನ ಟೇಕಾಫ್‌ ಆಗುವ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದುಕೊಂಡಿದ್ದು, ರನ್‌ ವೇ ತುಂಬಾ ಕೋಟಿ ಬೆಲೆ ಬಾಳುವ ಚಿನ್ನ, ವಜ್ರ, ಎಲ್ಲೆಂದರಲ್ಲಿ ಚೆಲ್ಲಪಿಲ್ಲಿಯಾಗಿದೆ.
ಮೂರೂವರೆ ಟನ್‌ ತೂಕದ ಲೋಹ ಕೆಳಗೆ ಬಿದ್ದಿರುವುದಾಗಿ ಹೇಳಲಾಗಿದೆ. ಕೂಡಲೆ ಭದ್ರತಾ ಸಿಬ್ಬಂದಿ ಅವುಗಳನ್ನು ಸಂಗ್ರಹಿಸಿದ್ದು, ಲೋಪವೆಸಗಿದ ಸಿಬ್ಬಂದಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com