ಪ್ರೀತಿ ಮಾಡ್ತೀನಿ ಅಂದವನ ನಂಬಿ ನಗ್ನವಾದಳು ಯುವತಿ : ಆದ್ರೆ ಯುವಕ ಮಾಡಿದ್ದೇನು ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಬೆಲೆಯೇ ಇಲ್ಲ ಎಂಬಂತೆ ಅನೇಕ ಯುವಕರು ವರ್ತಿಸುತ್ತಿದ್ದಾರೆ. ಅದೇ ರೀತಿ ಪ್ರೀತಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದು ನಡೆದಿದೆ.
ಪ್ರಿಯತಮೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ಮಾಡಿದ ಯುವಕನೊಬ್ಬ ಅದನ್ನು ಫೇಸ್‌ಬುಕ್‌ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.


ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಅರ್ಜುನ್‌ ಎಂಬಾತ ಪ್ರಿಯತಮೆಗೆ ಬೆದರಿಕೆಯೊಡ್ಡಿದ ಯುವಕ. ಒಂದು ವರ್ಷದಿಂದ ಅರ್ಜುನ್‌ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯ ಬೆತ್ತಲೆ ಫೋಟೋಗಳನ್ನು ಹಾಗೂ ವಿಡಿಯೋವನ್ನು ಮಾಡಿ ಹಣ ಕೊಡು, ಇಲ್ಲವಾದರೆ ಈ ಫೋಟೋ ಹಾಗೂ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ಅರ್ಜುನ್‌ಗೆ ಹೆದರಿ ಯುವತಿ 50 ಸಾವಿರ ರೂ ನೀಡಿದ್ದು, ಮತ್ತೆ ಅರ್ಜುನ್‌ 50 ಸಾವಿರ ರೂ ಕೇಳಿದ್ದಾನೆ. ಆಗ ಯುವತಿ ನಿರಾಕರಿಸಿದ್ದಾಳೆ. ಆಗ ವಿಡಿಯೋ ಹಾಗೂ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಬೇಸತ್ತ ಯುವತಿ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ.
ಸದ್ಯ ಪೊಲೀಸರು ಅರ್ಜುನ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com