ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದ 11 ಮಂದಿ ದಲಿತರು

 

ಅವರೆಲ್ಲಾ ಮನುಷ್ಯ ಸೃಷ್ಟಿಸಿದ ಜಾತಿಯತೆಯಿಂದ ತತ್ತರಿಸಿದವರು. ಅಸಮಾನತೆಯಿಂದ ಬೆಂದವರು. ಈ ಧರ್ಮದಲ್ಲಿ ಸಮಾನತೆಯ ನೆಮ್ಮದಿ ಇಲ್ಲ ಎಂಬ ನಿರ್ಧಾರಕ್ಕೆ ಬಂದವರು. ಕೊನೆಗೂ ಅವರಿಗೆ ದೊರಕ್ಕಿದ್ದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ತೋರಿಸಿದ ಮಾರ್ಗ. ಹಿಂದೂ ಧರ್ಮದ ಜಾತಿಯತೆ ಅಸಮಾನತೆಯಿಂದ‌ ಬೇಸೆತ್ತ ದಕ್ಷಿಣ ಕನ್ನಡ ಜಿಲ್ಲೆಯ ಐದು ದಲಿತ ಕುಟುಂಬಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿವೆ.

ಬೌದ್ಧ ಧರ್ಮಕ್ಕೆ ಐದು ಕುಟುಂಬದ 11 ಜನರು ಮತಾಂತರಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಅಲಂಕಾರಿನಲ್ಲಿ ನಡೆಯಿತು ಮತಾಂತರ ನಡೆದಿದೆ. ಮತಾಂತರಗೊಂಡ ದಲಿತರಿಗೆ ಧರ್ಮ ಗುರು ಸುಗತಪಾಲ ಭಂತೇಜಿಯವರು ಬುದ್ಧ ಶಾಸನದ ಪ್ರಕಾರ ಬುದ್ಧ ಪೂಜೆ ನೆರವೇರಿಸಿ ಧಮ್ಮೋಪದೇಶ ನೀಡಿದರು.ಬಳಿಕ ದಲಿತ ಸಮುದಾಯದ ಪುಟ್ಟಣ್ಣ, ಸುಶೀಲ, ನಯನ್ ಕುಮಾರ್, ನಮಿತ, ಸತೀಶ್ ಕುಮಾರ್, ಪ್ರೇಮ, ಹರ್ಷ, ಸುಶೀಲಾ, ಮನೋಜ್ ಕುಮಾರ್, ವಿಶ್ವನಾಥ್ ಹಾಗೂ ಗಣೇಶ್ ಎಂಬವರು ಬೌದ್ಧ ಧರ್ಮದ ದೀಕ್ಷೆ ಪಡೆದು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಸದ್ಯ 11 ಮಂದಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಇನ್ನು ಮುಂದಿನ ದಿನದಲ್ಲಿ ಬೃಹತ್ ಸಂಖ್ಯೆಯಲ್ಲಿ ದಲಿತರು ಹಿಂದೂ ಧರ್ಮದಿಂದ‌ ಬೌದ್ಧ ಧರ್ಮಕ್ಕೆ ಮತಾಂತರ ಆಗಲಿದ್ದಾರಂತೆ. ತಮಗಾದ ಅನ್ಯಾಯ ಹಾಗೂ ನಮ್ಮ ಮೇಲಾಗುತ್ತಿರೋ ಜಾತಿ ದೌರ್ಜನ್ಯದ ವಿರುದ್ಧ ಬಂಡಾಯವೆದ್ದು ಅಂಬೇಡ್ಕರ್ ತೋರಿಸಿದ ಹಾದಿ ತುಳಿಯುತ್ತೇವೆ ಅಂತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com