ಮಾಸ್ಟರ್ ಬ್ಲಾಸ್ಟರ್ Sachin ಪಾಲಿಗೆ ಇಂದು ಅವಿಸ್ಮರಣೀಯ ದಿನ : ಕಾರಣವೇನು..?

‘ ಗಾಡ್ ಆಫ್ ಕ್ರಿಕೆಟ್ ‘ ಎಂದೇ ಹೆಸರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಸರ್ವಶ್ರೇಷ್ಟ ಬ್ಯಾಟ್ಸಮನ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ. ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ 100 ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಅವರದ್ದು. ಸಚಿನ್ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ‘ ಭಾರತ ರತ್ನ ‘ ಪಡೆದ ಮೊದಲ ವ್ಯಕ್ತಿಯೂ ಹೌದು.

ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬದುಕಿನಲ್ಲಿ ಮಾರ್ಚ್ 16 ರ ದಿನಾಂಕ ವಿಶೇಷ ಮಹತ್ವವನ್ನು ಹೊಂದಿದೆ. ಹೌದು, ಇಂದಿನ ದಿನಾಂಕ ಸಚಿನ್ ಪಾಲಿಗೆ ಅವಿಸ್ಮರಣೀಯವಾದದ್ದು. ಅದಕ್ಕೆ ಕಾರಣವೂ ಇದೆ.

Image result for sachin tendulkar 100th ton

2012 ಮಾರ್ಚ್ 16 ರಂದು ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ 100 ನೇ ಶತಕವನ್ನು ದಾಖಲಿಸಿದ್ದರು. ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸಚಿನ್ ತಮ್ಮ ನೂರನೇ ಶತಕ ಸಿಡಿಸಿದ್ದರು. 147 ಎಸೆತಗಳನ್ನು ಎದುರಿಸಿದ್ದ ಸಚಿನ್ 12 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 114 ರನ್ ಗಳಿಸಿದ್ದರು.

Leave a Reply

Your email address will not be published.