ಕಾಂಗ್ರೆಸ್‌ನ ಅಧೋಗತಿಗೆ ಸಿದ್ದರಾಮಯ್ಯನವರೇ ಕಾರಣವಾಗ್ತಿದ್ದಾರೆ : ಈಶ್ವರಪ್ಪ

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಪ್ರಧಾನಿ ಮೋದಿಯವರ ಮಾತು ಸತ್ಯವಾಗಿದೆ. ಸ್ವತಃ ಕಾಂಗ್ರೆಸ್‌ ನಾಯಕರೇ ಅದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.
ದೇವೇಗೌಡರಿಗೆ ಟೋಪಿ ಹಾಕಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿಕೊಂಡರು. ಪ್ರತಿಪಕ್ಷ ನಾಯಕರೂ ಆದರೂ. ಲಾಟರಿ ಹೊಡೆದು ಅವರು ಸಿಎಂ ಆಗಿದ್ದಾರೆ. ಬಿಜೆಪಿ ಬಗ್ಗೆ ಬಳಸಬಾರದ ಪದ ಬಳಸಿ ಮಾತನಾಡಿದ್ರು. ಈಗ ಅವರ ಪಕ್ಷದವರೇ ಉಲ್ಟಾ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ನ ಅಧೋಗತಿಗೆ ಸಿದ್ದರಾಮಯ್ಯನವರೇ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಶೋಕ್‌ ಖೇಣಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಾಗ ಖರ್ಗೆ ಹಾಗೂ ಮೊಯ್ಲಿ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com