ಮುಲಾಜಿಲ್ಲದೇ ರೌಡಿಗಳು, ಅತ್ಯಾಚಾರಿಗಳನ್ನು ಶೂಟ್ ಮಾಡಿ : ರಾಮಲಿಂಗಾರೆಡ್ಡಿ

ಬೆಂಗಳೂರು : ಸರಗಳ್ಳರು, ರೌಡಿಗಳು, ಅತ್ಯಾಚಾರಿಗಳನ್ನು ಹಿಂದೂ ಮುಂದೂ ಯೋಚಿಸದೇ ಶೂಟ್‌ ಮಾಡಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ರೌಡಿಗಳೇ ಪೊಲೀಸರ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗಷ್ಟೇ ಪೊಲೀಸ್ ಅಧಿಕಾರಿಯ ಪತ್ನಿಯ ಮಾಂಗಲ್ಯ ಸರವನ್ನು ಕದ್ದಿದ್ದಾರೆ. ಪೊಲೀಸರಿಗೆ ಗನ್‌ ನೀಡಿರುವುದು ಅಪರಾಧಿಗಳನ್ನು ಶಿಕ್ಷಿಸುವ ಸಲುವಾಗಿಯೇ ಹೊರತು ಸುಮ್ಮನೇ ಜೋಪಾನವಾಗಿ ಇಟ್ಟುಕೊಳ್ಳುವುದಕ್ಕಲ್ಲ ಎಂದಿದ್ದಾರೆ.
ಇದೇ ವೇಳೆ ಬಾರ್‌, ರೆಸ್ಟೋರೆಂಟ್‌ಗಳನ್ನು ನಿಗಧಿತ ಸಮಯದೊಳಗೆ ಮುಚ್ಚಿಸಬೇಕು. ಕದ್ದ ಮಾಲುಗಳನ್ನು ಖರೀದಿ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಇನ್ನು ಉತ್ತರ ಪ್ರದೇಶದಿಂದ ಬಂದಿರುವ ಬವೇರಿಯಾ ಗ್ಯಾಂಗನ್ನು ವಾಪಸ್‌ ಹೋಗಲು ಬಿಡುವುದಿಲ್ಲ. ಇಲ್ಲೇ ಪರಪ್ಪನ ಅಗ್ರಹಾರಕ್ಕೆ ಕಳಿಸುತ್ತೇವೆ. ಪೊಲೀಸರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ರೌಡಿಗಳು, ಅತ್ಯಾಚಾರಿಗಳ ವಿರುದ್ದ ಪೊಲೀಸರು ತೆಗೆದುಕೊಳ್ಳುವ ಕಠಿಣ ನಿರ್ಧಾರಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com