ಜೋಧ್‌ಪುರದಲ್ಲಿ ಬಾತ್‌ ಟಬ್‌ನೊಳಗೆ ಬಿದ್ದ ಹಿಲರಿ ಕ್ಲಿಂಟನ್‌ : ಕೈ ಮೂಳೆ ಮುರಿತ

ಜೋಧ್‌ಪುರ : ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರ ಪತ್ನಿ ಹಿಲರಿ ಕ್ಲಿಂಟನ್‌ ಬಾತ್‌ ಟಬ್‌ನಲ್ಲಿ ಬಿದ್ದಿದ್ದು, ಕೈ ಮೂಳೆ ಮುರಿದಿರುವುದಾಗಿ ತಿಳಿದುಬಂದಿದೆ.
ಹಿಲರಿ ಭಾರತ ಪ್ರವಾಸದಲ್ಲಿದ್ದು, ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ್‌ ಪ್ಯಾಲೇಸ್‌ನಲ್ಲಿ ತಂಗಿದ್ದರು. ಈ ವೇಳೆ ಬಾತ್‌ ಟಬ್‌ನಲ್ಲಿ ಬಿದ್ದಿದ್ದು, ಅವರ ಬಲಗೈಗೆ ಪೆಟ್ಟಾಗಿದೆ. ಸದ್ಯ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅವರ ಬಲಗೈ ಮೂಳೆ ಮುರಿದಿರುವುದಾಗಿ ವೈದ್ಯರು ಹೇಳಿದ್ದಾರೆ.
ನಾವು ಸಿಟಿ ಸ್ಕ್ಯಾನ್‌ ಹಾಗೂ ಎಕ್ಸ್‌ರೇ ಮಾಡಿದ್ದೇವೆ. ಕ್ಲಿಂಟನ್‌ ಅವರ ಮಣಿಕಟ್ಟಿನ ಭಾಗ ಮುರಿದಿರುವುದು ತಿಳಿದುಬಂದಿದೆ. ಅವರಿಗೆ ಈಗ ಕೆಲ ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಲಂಡನ್‌ನಲ್ಲಿ ಹಿಲರಿ ಕಾಲಿನ ಬೆರಳನ್ನು ಮುರಿದುಕೊಂಡಿದ್ದರು. ಇಂದು ಬಾತ್‌ ಟಬ್‌ನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದಾರೆ.
ಡೊನಾಲ್ಡ್‌ ಟ್ರಂಪ್‌ ವಿರುದ್ದ ಸೋಲಿನ ಕಥೆಯನ್ನು ಹೇಳುವ ವಾಟ್‌ ಹ್ಯಾಪನ್ಡ್‌ ಪುಸ್ತಕದ ಪ್ರಚಾರಕ್ಕಾಗಿ ಹಿಲರಿ ಭಾರತಕ್ಕೆ ಆಗಮಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com