All England Open : ಕ್ವಾರ್ಟರ್ ಫೈನಲ್‍ಗೆ ಸಿಂಧು, ಪ್ರಣಯ್ : ಶ್ರೀಕಾಂತ್‍ಗೆ ನಿರಾಸೆ

ಓಲಿಂಪಿಕ್ ಪದಕ ವಿಜೇತೆಯಾದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಥಾಯ್ಲೆಂಡ್ ದೇಶದ ನಿಚಾವೊನ್ ಜಿಂದಾಪೊಲ್ ಅವರ ವಿರುದ್ಧ 21-13, 13-21, 21-18 ಪಾಯಿಂಟ್ ಗಳಿಂದ ಸಿಂಧು ಜಯ ಗಳಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ಟಾಮ್ಮಿ ಸುಜಿಯಾರ್ಟೊ ಅವರನ್ನು ಮಣಿಸಿದ ಭಾರತದ ಎಚ್.ಎಸ್ ಪ್ರಣಯ್ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಭಾರತದ ಮತ್ತೋರ್ವ ಆಟಗಾರ ಕಿಡಂಬಿ ಶ್ರೀಕಾಂತ್, ಚೀನಾದ ಹುವಾಂಗ್ ಯುಕ್ಸಿಯಾಂಗ್ ಅವರ ವಿರುದ್ಧ ಸೋತು ನಿರಾಸೆ ಮೂಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com