ಈ ರಾಶಿಯವರಿಗೆ ಯುಗಾದಿಯಿಂದ ಆರಂಭವಾಗಲಿದೆ ರೊಮ್ಯಾಂಟಿಕ್‌ ದಿನಗಳು

ಮಾರ್ಚ್‌ 18 ರಂದು ಯುಗಾದಿ ಹಬ್ಬ. ಹಿಂದೂಗಳ ಪ್ರಮುಖ ಹಬ್ಬವಾದ ಯುಗಾದಿಯನ್ನು ಹಿಂದೂಗಳ ಹೊಸ ವರ್ಷ ಎಂದೂ ಕರೆಯಲಾಗುತ್ತದೆ. ಈ ಬಾರಿ ಸಹ ಹೊಸ ವರ್ಷವನ್ನು ಆಚರಿಸಲು ಎಲ್ಲೆಡೆ ಸಿದ್ಧತೆ ನಡೆದಿದೆ.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂಗಳ ಹೊಸ ವರ್ಷವಾದ ಯುಗಾದಿಯಂದು ಈ ಬಾರಿ ಪ್ರೇಮಿಗಳಿಗೆ ಒಳ್ಳೆಯದಾಗುತ್ತದೆ ಎನ್ನಲಾಗಿದೆ. ಈ ವರ್ಷ ಪ್ರೇಮಿಗಳು ಪ್ರೇಮ ನಿವೇದನೆ ಮಾಡಲು ಸೂಕ್ತ ಸಮಯ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಯಾವ್ಯಾವ ರಾಶಿಯವರಿಗೆ ಈ ಬಾರಿ ಒಳ್ಳೆಯದಾಗುತ್ತದೆ ಎಂಬುದನ್ನು ನೋಡೋಣ.


ಮೇಷ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಪ್ರೇಮ ನಿವೇದನೆ ಮಾಡಲು, ಅಥವಾ ಮದುವೆಯಾಗಲು ಸೂಕ್ತ ಕಾಲವಾಗಿದೆ. ಯುಗಾದಿಯ ಬಳಿಕ ಮೇಷ ರಾಶಿಯವರ ಲಕ್‌ ಬದಲಾಗಿ, ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗಿದೆ.


ವೃಷಭ : ಈ ಯುಗಾದಿ ವೃಷಭ ರಾಶಿಯವರಿಗೆ ಅಷ್ಟೇನೂ ಹಿತವಲ್ಲ. ಇನ್ನು ಪ್ರೇಮದ ವಿಚಾರದಲ್ಲಿ ಅಡೆತಡೆ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಪೋಷಕರ ಮೂಲಕವೇ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳಿತು. ಪೋಷಕರ ಮಾತನ್ನು ಮೀರದೆ ವರ್ತಿಸಿದರೆ ಭವಿಷ್ಯದಲ್ಲಿ ಹೆಚ್ಚು ಸುಖವಾಗಿರುವಿರಿ.

ಮಿಥುನ : ಮಿಥುನ ರಾಶಿಯವರಿಗೆ ಈ ಬಾರಿ ಯುಗಾದಿ ಬೆಲ್ಲ ನೀಡಲಿದೆ. ಪ್ರೇಮಿಗಳಿಗೆ ಈ ಯುಗಾದಿ ಸಂತೋಷ ಹೆಚ್ಚಿಸಲಿದ್ದು, ನೀವಂದುಕೊಂಡ ಕೆಲಸ ಸುಲಭವಾಗಿ ನಡೆಯುತ್ತದೆ. ಅಲ್ಲದೆ ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆತು ಸಖಮಯ ಜೀವನ ನಿಮ್ಮದಾಗಲಿದೆ.


ಕರ್ಕಾಟಕ : ಈ ರಾಶಿಯವರಿಗೂ ಯುಗಾದಿ ಬಳಿಕ ಒಳ್ಳೆಯದಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೆ ಪ್ರೀತಿಯ ವಿಚಾರದಲ್ಲಿ ಈ ರಾಶಿಯವರು ಸ್ವಲ್ಪ ಎಚ್ಚರಿಕೆ ವಹಿಸಿದರೆ ಒಳಿತು. ಪ್ರೇಮಿಗಳು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಪೋಷಕರ ಅನುಮತಿ ಮೀರಿ ನಡೆಯದಿದ್ದರೆ ಒಳಿತು.


ಸಿಂಹ : ಸಿಂಹ ರಾಶಿಯವರಿಗೆ ಈ ಬಾರಿ ಬೆಲ್ಲಕ್ಕಿಂತ ಬೇವೇ ಹೆಚ್ಚು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ. ಸಿಂಹ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಒಳಿತು. ಅಪಘಾತ ಸಾದ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದಷ್ಟು ಪ್ರೀತಿ ಪ್ರೇಮ ವಿಚಾರದಿಂದ ದೂರವಿದ್ದರೆ ಒಳ್ಳೆಯದು.
ಕನ್ಯಾ : ಕನ್ಯಾ ರಾಶಿಯವರಿಗೆ ಈ ಬಾರಿಯ ಯುಗಾದಿ ಸಂತೋಷದಾಯಕವಾಗಿರುತ್ತದೆ. ಪ್ರೀತಿಯ ವಿಚಾರದಲ್ಲೂ ಅದೃಷ್ಠ ನಿಮ್ಮ ಕೈ ಹಿಡಿಯಲಿದೆ. ಅಲ್ಲದೆ ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಲಭಿಸುತ್ತದೆ. ಸಂತೋಷದಾಯಕ ಜೀವನ ನಿಮ್ಮದಾಗುವುದು.

ತುಲಾ : ಈ ರಾಶಿಯವರಿಗೆ ಈ ಬಾರಿ ಲಕ್‌ ಕೈ ಹಿಡಿಯಲಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಯಶಸ್ಸು ನಿಮ್ಮದಾಗುವುದು ಖಂಡಿತ. ಅಲ್ಲದೆ ಇದಕ್ಕೆ ಪೋಷಕರ ಒಪ್ಪಿಗೆಯೂ ದೊರೆಯುತ್ತದೆ. ಇನ್ನು ಮದುವೆಯಾಗುವವರಿಗೂ ಸೆಪ್ಟಂಬರ್ ಬಳಿಕ ಶುಭಕಾಲ ಕೂಡಿ ಬರಲಿದ್ದು, ಈ ಬಾರಿಯ ಯುಗಾದಿ ಬಳಿಕ ಜೀವನದ ದಿಕ್ಕೇ ಬದಲಾಗುವ ಸಂಭವವಿದೆ.

ವೃಶ್ಚಿಕ : ಈ ರಾಶಿಯವರಿಗೆ ಯುಗಾದಿ ಅಷ್ಟೇನೂ ಸಂತೋಷದಾಯಕವಾಗಿರುವುದಿಲ್ಲ. ಈ ರಾಶಿಯವರು ಖಿನ್ನತೆಗೊಳಗಾಗಿದ್ದು, ಯುಗಾದಿ ಬಳಿಕ ಸ್ವಲ್ಪ ಹತೋಟಿಗೆ ಬರಲಿದೆ. ಅಲ್ಲದೆ ಮಾನಸಿಕ ನೆಮ್ಮದಿ ದೊರೆಯಲಿದೆ. ಆರ್ಥಿಕತೆಯೂ ಅಭಿವೃದ್ದಿಯಾಗಲಿದ್ದು, ಪ್ರೇಮಿಗಳಿಗೆ ಈ ಯುಗಾದಿ ಶುಭವಲ್ಲ.


ಧನಸ್ಸು : ಈ ರಾಶಿಯವರಿಗೆ ಈ ಬಾರಿಯ ಯುಗಾದಿ ಲಾಭ ತಂದುಕೊಡಲಿದೆ. ಸ್ವಲ್ಪ ಮಟ್ಟಿಗಿನ ಕಷ್ಟಗಳು ಎದುರಾದರೂ ಅದನ್ನು ಸುಲಭವಾಗಿ ಎದುರಿಸುತ್ತೀರಿ. ಪ್ರೀತಿ ಪ್ರೇಮದ ವಿಚಾರದಲ್ಲಿ ಅಷ್ಟೇನೂ ತೊಂದರೆ ಇಲ್ಲದಿದ್ದರೂ ಮುಂದಿನ ಸೆಪ್ಟಂಬರ್ ತನಕ ಕಾಯುವುದು ಉತ್ತಮ.


ಮಕರ : ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಪ್ರೀತಿ ವಿಚಾರವಾಗಿಯೂ ನೀವಂದುಕೊಂಡ ಕೆಲಸ ಸಲೀಸಾಗಿ ನಡೆಯುತ್ತದೆ. ಅಲ್ಲದೆ ಆರ್ಥಿಕವಾಗಿಯೂ ಲಾಭವಾಗುತ್ತದೆ. ಆದರೆ ವಾಹನ ಚಲಾಯಿಸುವಾಗ ಸ್ವಲ್ ಎಚ್ಚರದಿಂದಿರುವುದು ಒಳಿತು.


ಕುಂಭ : ಈ ರಾಶಿಯವರಿಗೆ ವಿದೇಶಿ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಲಾಭವಾಗಲಿದೆ. ಪ್ರೇಮಿಗಳಿಗೆ ಅಷ್ಟೇನೂ ಒಳ್ಳೆಯದಲ್ಲದಿದ್ದರೂ ಪ್ರೇಮ ನಿವೇದನೆ ಮಾಡಲು ಸೆಪ್ಟಂಬರ್ ಬಳಿಕ ಒಳ್ಳೆಯ ಕಾಲ ಬರಲಿದೆ.
ಮೀನ : ಮೀನ ರಾಶಿಯವರಿಗೆ ಈ ಬಾರಿಯ ಯುಗಾದಿ ಬೇವು ಬೆಲ್ಲದ ಮಿಶ್ರಣವಾಗಲಿದೆ. ಹೆಚ್ಚಿನ ಸುತ್ತಾಟ ಇರಲಿದ್ದು, ಆಯಾಸವಾಗಲಿದೆ. ಪ್ರೀತಿ ವಿಚಾರದಲ್ಲಿ ಸಾಧ್ಯವಾದಷ್ಟು ಎಚ್ಚರದಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಪ್ರೀತಿ ವಿಚಾರದಲ್ಲಿ ಅವಸರ ಮಾಡಬೇಡಿ. ತಾಳ್ಮೆಯಿಂದಿದ್ದರೆ ಆಗುವ ಕೆಲಸ ಆಗುತ್ತದೆ.

Leave a Reply

Your email address will not be published.