ಯುಗಾದಿಯಂದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ….ಯಾಕೆ….?

ಇನ್ನೇನು ಯುಗಾದಿ ಹಬ್ಬ ಬಂದೇ ಬಿಟ್ಟಿದೆ. ಹಿಂದೂಗಳ ಪ್ರಕಾರ ಯುಗಾದಿ ಹೊಸವರ್ಷದ ಸಂಕೇತ. ಈ ಹಬ್ಬದಂದು ಸಿನಿಮಾರಂಗವೂ ಕಳೆಕಟ್ಟಲಿದೆ. ಸದ್ಯಕ್ಕೆ ದೊಡ್ಡ ಸಿನಿಮಾಗಳು ಈ ವಾರ ಬಿಡುಗಡೆ ಕಾಣುತ್ತಿಲ್ಲ. ಆದರೆ ದೊಡ್ಡ ಬಜೆಟ್‌ನ ಸಿನಿಮಾಗಳ ಮಹೂರ್ತ, ಟೀಸರ್‌ ಇವೆಲ್ಲವೂ ಯುಗಾದಿಗೆ ಬರಲಿದೆ.

ಈ ಯುಗಾದಿ ಹಬ್ಬದಂದು ಕಿಚ್ಚ ಸುದೀಪ್‌ ಅಭಿಮಾನಿಗಳು ಸಂತೋಷಪಡುವ ಹಬ್ಬವಾಗಿದೆ. ಸಾಕಷ್ಟು ದಿನಗಳಿಂದ ಕಾತುರರಾಗಿದ್ದ ಕಿಚ್ಚನ ಅಭಿಮಾನಿಗಳಿಗೆ ಯುಗಾದಿಯಂದು ಕಿಚ್ಚನ ಸಿನಿಮಾದ ಬಗ್ಗೆ ವಿಶೇಷವಾದ ಮಾಹಿತಿ ಸಿಗಲಿದೆ ಎಂದು ಗಾಂಧಿನಗರದಲ್ಲಿ ಗುಲ್ಲು ಹಬ್ಬಿದೆ.

ಹೌದು ಯುಗಾದಿ ಹಬ್ಬದಂದೇ ಪೈಲ್ವಾನ್‌ ಚಿತ್ರದ ಮಹೂರ್ತ ನಡೆಯಲಿದ್ದು, ಬಾಕ್ಸಿಂಗ್‌ಗಾಗಿ ತರಬೇತಿ ಪಡೆದಿರುವ ಕಿಚ್ಚನ ಪೈಲ್ವಾನ್‌ ಚಿತ್ರೀಕರಣ ಏಪ್ರಿಲ್‌ನಿಂದ ಪ್ರಾರಂಭವಾಗಲಿದೆ.

ಅಲ್ಲದೆ ಸುದೀಪ್‌ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಅಭಿನಯದ ದಿ ವಿಲನ್‌ ಸಿನಿಮಾದ ಟೀಸರ್‌ ಸಹ ಯುಗಾದಿಯಂದೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಿಚ್ಚನ ಮುಂದಿನ ಸಿನಿಮಾಗಳ ಬಗ್ಗೆ ಮತ್ತಷ್ಟು ವಿಶೇಷ ಮಾಹಿತಿ ಅಂದೇ ಲಭ್ಯವಾಗಲಿದೆಯಂತೆ. ಅದೇನು ಎಂದು ಯುಗಾದಿವರೆಗೂ ಕಾಯಲೇಬೇಕು.

Leave a Reply

Your email address will not be published.