Virushka ನಕಲು ಮಾಡಲು ಹೋದ ಯುವಜೋಡಿ : ಟ್ರೋಲ್ ಮಾಡಿದ ನೆಟ್ಟಿಗರು..!

ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಕೊಹ್ಲಿ ಅವರೊಂದಿನ ಫೋಟೊ ಒಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಅನುಷ್ಕಾ ವಿರಾಟ್ ಅವರ ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಫೋಟೊ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.

ವಿರುಷ್ಕಾ ಜೋಡಿಯಿಂದ ಪ್ರೇರಣೆ ಪಡೆದ ಹಿಂದಿಯ ಬಿಗ್ ಬಾಸ್ 11ನೇ ಸೀಸನ್ ಸ್ಪರ್ಧಿಗಳಾದ ಪುನೀಶ್ ಶರ್ಮಾ ಹಾಗೂ ಬಂದಗಿ ಕಾಲ್ರಾ ಅದೇ ರೀತಿಯಲ್ಲಿ ಮುತ್ತಿಡುವ ಫೋಟೊ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ವಿರುಷ್ಕಾ ಸ್ಟೈಲನ್ನು ಕಾಪಿ ಮಾಡಿದ ಬಿಗ್ ಬಾಸ್ ಜೋಡಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

Image result for bandgi kalra virat

‘ ಮೊದಲು ಮದುವೆಯಾಗಿ ನಂತರ ಇಂತಹ ಫೋಟೊ ಹಾಕಿ ‘ , ‘ ವಿರಾಟ್ ಅನುಷ್ಕಾ ಅವರನ್ನು ಕಾಪಿ ಮಾಡ್ತೀರಾ ಹ ಹಾ ಹಾ ‘ , ‘ ಈ ಪೋಸ್ ಕೊಹ್ಲಿ ಅನುಷ್ಕಾಗೆ ಚೆನ್ನಾಗಿ ಒಪ್ಪುತ್ತೆ ‘ ಎಂದು ಕಮೆಂಟಿಸಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ‘ ಇಬ್ಬರೂ ಜೊತೆಯಾಗಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ ‘ , ‘ ಕಾಪಿ ಮಾಡಿದ್ದೀರಾ, ಆದರೂ ಪರವಾಗಿಲ್ಲ ‘ ಎಂದು ಕಮೆಂಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com