ಚುನಾವಣೆಯ ಸೋಲಿನ ಬಳಿಕ ಯೋಗಿ ಆದಿತ್ಯನಾಥ್‌ಗೆ ಮತ್ತೊಂದು ಹೊಡೆತ

ಗೋರಕ್‌ ಪುರ : ಬುಧವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪಾಲಿಗೆ ಕೆಟ್ಟದಿನವಾಗಿದ್ದು, ಯೋಗಿ ಪ್ರತಿನಿಧಿಸಿದ್ದ ಗೋರಕ್‌ಪುರ ಹಾಗೂ ಉಪಮುಖ್ಯಮಂತ್ರಿ ಕೇಸವ್‌ ಪ್ರಸಾದ್‌ ಮೌರ್ಯ ಜಯಗಳಿಸಿದ್ದ ಫುಲ್ಪುರ್‌ ಲೋಕಸಭಾ ಕ್ಷೇತ್ರದಲ್ಲೇ ಬಿಜೆಪಿ ಸೋಲನುಭವಿಸಿದೆ.

ಇದೇ ವೇಳೆ ಬೆಸ್ತರ ಸಂಘಟನೆ ನಿಶದ್‌ ಗೋರಕ್‌ನಾಥ್‌ ದೇವಸ್ಥಾನದ ಮೇಲೆ ಹಕ್ಕು ಸಾಧಿಸಿದ್ದು, ಈಗ ಯೋಗಿ ಮುಖ್ಯಸ್ಥರಾಗಿರುವ ದೇವಾಲಯವನ್ನು ತಮ್ಮ ಸುಪರ್ದಿಗೆ ನೀಡುವಂತೆ ಆಗ್ರಹಿಸಿದೆ.

ಗೋರಕ್‌ ನಾಥ್‌ ದೇವಾಲಯ ಬೆಸ್ತ ಸಮುದಾಯಕ್ಕೆ ಸೇರಿದ್ದಾಗಿದ್ದು, ಈ ದೇವಸ್ಥಾನವನ್ನು 19ನೇ ಶತಮಾನದ್ಲಿ ಮೇಲ್ಜಾತಿಯವು ಒತ್ತಾಯಪೂರ್ವಕವಾಗಿ ವಶಪಡಿಸಿಕೊಂಡಿದ್ದರು. ಆದ್ದರಿಂದ ದೇವಾಲಯದ ಮುಖ್ಯಸ್ಥನ ಸ್ಥಾನದಲ್ಲಿ ಬೆಸ್ತನೊಬ್ಬನನ್ನು ನೇಮಿಸಬೇಕು ಎಂದು ನಿರ್ಬಲ ಇಂಡಿಯನ್‌ ಶೋಷಿತ್‌ ಹಮಾರಾ ಆಮ್ ದಲ್‌ (ನಿಶದ್‌) ಅಧ್ಯಕ್ಷ ಸಂಜಯ್‌ ನಿಶದ್‌ ತಿಳಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಜಯ್‌ ಅವರ ನಿಶದ್‌ ಪಕ್ಷ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದು, ಒಂದು ಸ್ಥಾನವನ್ನು ಗೆದ್ದಿತ್ತು. ಈಗ ಸಂಜಯ್‌ ಪುತ್ರ ಪ್ರವೀಣ್ ಕುಮಾರ್ ನಿಶದ್ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೋರಕ್‌ಪುರದಲ್ಲಿ  ಲಕ್ಷಗಳ ಅಂತರದಿಂದ ಮಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಮ್ಮ ಸುಪರ್ದಿಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com