ನಾನೂ ಸೇರಿ ಉಡುಪಿಯ ಅಷ್ಠಮಠದ ಹಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದ ಶಿರೂರು ಶ್ರೀ !!

ಉಡುಪಿ : ಇತ್ತೀಚೆಗಷ್ಟೇ ಪಕ್ಷೇತರನಾಗಿ ಚುನಾವಣೆಗೆ ಇಳಿಯುತ್ತೇನೆ. ಬಿಜೆಪಿಯಿಂದ ಟಿಕೆಟ್‌ ಸಿಕ್ಕರೆ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದ ಶಿರೂರು ಮಠದ ಶ್ರೀಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ನನಗೂ ಸೇರಿದಂತೆ ಅಷ್ಟಮಠದ ಅನೇಕ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ. ಇದನ್ನು ಬಾಯ್ಬಿಟ್ಟರೆ ಉಡುಪಿಯ ಮರ್ಯಾದೆ ಹೋಗುತ್ತದೆ. ಆದ್ದರಿಂದ ಅವರು ಹೆಸರು ಹೇಳುವುದಿಲ್ಲ ಎಂದಿದ್ದಾಗಿ ತಿಳಿದುಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ನಾನು ಸೇರಿದಂತೆ ಅಷ್ಟಮಠದ ಹಲವು ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ. ನಾವು 8ನೇ ವಯಸ್ಸಿನಲ್ಲಿದ್ದಾಗಲೇ ನಮ್ಮನ್ನು ಮಠಕ್ಕೆ ಸೇರಿಸಲಾಗುತ್ತದೆ. ಬಳಿಕ ವಯಸ್ಸಿಗೆ ಬಂದ ಸಂದರ್ಭದಲ್ಲಿ ನಮಗೂ ಆಸೆ, ಆಕಾಂಕ್ಷೆಗಳು ಹುಟ್ಟುತ್ತವೆ. ಇದೇನು ಗೊಡ್ಡ ವಿಷಯವಲ್ಲ. ನನಗೆ ಮಾತ್ರವಲ್ಲ ಅಷ್ಠಮಠದ ಅನೇಕ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದು ಶಿರೂರು ಶ್ರೀ ಹೇಳಿದ್ದಾರೆ.

ಈ ಹೇಳಿಕೆ ಎಲ್ಲೆಡೆ ವೈರಲ್ ಆಗಿದ್ದು, ಇನ್ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನ ಕಾದುನೋಡಬೇಕಿದೆ.

Leave a Reply

Your email address will not be published.