Pakistan : ಪ್ರಧಾನಿ ನವಾಜ್ ಷರೀಫ್ ನಿವಾಸದ ಬಳಿ ಬಾಂಬ್ ದಾಳಿ : 9 ಜನರ ಸಾವು

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಲಾಹೋರ್ ನಿವಾಸದ ಬಳಿ ಸೋಮವಾರ ಉಗ್ರರಿಂದ ಆತ್ಮಾಹುತಿ ಬಾಂಬ್ ನಡೆಸಲಾಗಿದ್ದು, ಘಟನೆಯಲ್ಲಿ ಐವರು ಪೋಲೀಸರು ಸೇರಿದಂತೆ 9 ಜನರು ದುರ್ಮರಣ ಹೊಂದಿದ್ದು, 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೋಲೀಸರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಪ್ರಧಾನಿ ನವಾಜ್ ಷರೀಫ್ ನಿವಾಸದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿರುವ ಚೆಕ್ ಪೋಸ್ಟ್ ಬಳಿಯಲ್ಲಿ, ತಬ್ಲೀಘಿ ಜಮಾತ್ ಕೇಂದ್ರದ ಹತ್ತಿರ ಉಗ್ರನೋರ್ವ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾನೆ. ತನ್ನನ್ನು ಸ್ಫೋಟಿಸಿಕೊಂಡು 9 ಜನರ ಸಾವಿಗೆ ಕಾರಣನಾದ ಉಗ್ರ ಹದಿ ಹರೆಯದವನಾಗಿದ್ದ.

ಮರಣ ಹೊಂದಿದ 5 ಪೋಲೀಸರಲ್ಲಿ ಇಬ್ಬರು ಇನ್ಸಪೆಕ್ಟರ್ ಹಾಗೂ ಮೂವರು ಪೇದೆಗಳು ಸೇರಿದ್ದಾರೆ. ಗಾಯಗೊಂಡ 25 ಜನರಲ್ಲಿ 14 ಜನ ಪೋಲೀಸ್ ಸಿಬ್ಬಂದಿಯವರು ಇದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com