ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ಹೋರಾಟಕ್ಕೆ ನ್ಯಾ. ಸಂತೋಷ್‌ ಹೆಗ್ಡೆ ಬೆಂಬಲ

ಹೈದರಾಬಾದ್ : ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಲೋಕಪಾಲ್ ನೇಮಕ ಮಾಡಬೇಕು ಎಂ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಡೆಸುತ್ತಿರುವ ಚಳುವಳಿಗೆ ನಿವೃತ್ತ  ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೆಂಬಲ ಸೂಚಿಸಿದ್ದಾರೆ.

ಮಾರ್ಚ್‌ 23ರಂದು ಅಣ್ಣಾ ನಿರಶನ ಪ್ರತಿಭಟನೆ ನಡೆಸಲಿದ್ದು, ಇದರಲ್ಲಿ ಭಾಗಿಯಾಗಲು ನಿರ್ಧರಿಸಿರುವುದಾಗಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೋರಾಟಕ್ಕೆ ಆಗಮಿಸುವಂತೆ ಅಣ್ಣಾ ಹಜಾರೆ ಆಹ್ವಾನಿಸಿದ್ದಾರೆ. ಈ ಹೋರಾಟ ರಾಜಕೀಯೇತರವಾಗಿರುವವರೆಗೂ ನನ್ನ ಬೆಂಬಲವಿರುತ್ತದೆ ಎಂದಿದ್ದಾರೆ.

ಅಲ್ಲದೆ ಮೋದಿ ಗುಜರಾತ್‌ ಸಿಎಂ ಆಗಿದ್ದಾಗಲೂ ಗುಜರಾತ್‌ನಲ್ಲಿ ಲೋಕಾಯುಕ್ತ ನೇಮಕ ಮಾಡಿರಲಿಲ್ಲ. ಪ್ರಧಾನಿ ಆದ ಬಳಿಕ ಇದೇ ಮನಸ್ಥಿತಿ ಮುಂದುವರಿದಿದೆ. ಲೋಕಪಾಲ್‌ ನೇಮಕ ಮಾಡಿದರೆ ಆಡಳಿತಾರೂಢ ಪಕ್ಷದ ಸತ್ಯಗಳು ಬಯಲಾಗುತ್ತವೆಂಬ ಭೀತಿ ಇದೆ. ಅದಕ್ಕಾಗಿಯೇ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com