Football : ಚಾಂಪಿಯನ್ಸ್ ಲೀಗ್‍ನಲ್ಲಿ 100ನೇ ಗೋಲ್ ಬಾರಿಸಿದ ಲಿಯೊನೆಲ್ ಮೆಸ್ಸಿ..!

ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಚಾಂಪಿಯನ್ಸ್ ಲೀಗ್ ನಲ್ಲಿ ತಮ್ಮ 100ನೇ ಗೋಲ್ ದಾಖಲಿಸಿದ್ದಾರೆ. ಬಾರ್ಸಿಲೋನಾ ಹಾಗೂ ಚೆಲ್ಸೀ ತಂಡಗಳ ನಡುವೆ ಕ್ಯಾಟಲೋನಿಯಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 2 ಗೋಲ್ ಬಾರಿಸಿದ ಲಿಯೊನೆಲ್ ಮೆಸ್ಸಿ ಈ ಸಾಧನೆ ಮಾಡಿದರು.

ಫುಟ್ಬಾಲ್ ಇತಿಹಾಸದ ಸರ್ವಶ್ರೇಷ್ಟ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಲಿಯೊನೆಲ್ ಮೆಸ್ಸಿ, ಚೆಲ್ಸೀ ವಿರುದ್ಧ ಪಂದ್ಯದಲ್ಲಿ 3ನೇ ಹಾಗೂ 62ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಚೆಲ್ಸೀ ತಂಡವನ್ನು 3-1 ರಿಂದ ಮಣಿಸಿದ ಬಾರ್ಸಿಲೋನಾ ಚಾಂಪಿಯನ್ಸ್ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿದೆ.

Leave a Reply

Your email address will not be published.

Social Media Auto Publish Powered By : XYZScripts.com