ಕೊಹ್ಲಿಯನ್ನು ‘ ಜೋಕರ್ ‘ ಅಂದ ಆಫ್ರಿಕಾದ ಮಾಜಿ ಕ್ರಿಕೆಟರ್ : ಕಾರಣವೇನು..?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ‘ ಜೋಕರ್ ‘ ನಂತೆ ವರ್ತಿಸಿದ್ದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಪಾಲ್ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಟ್ವೀಟ್ ಮಾಡಿರುವ ಪಾಲ್ ಹ್ಯಾರಿಸ್ ‘ ಟೆಸ್ಟ್ ಸರಣಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ Clown ನಂತೆ ವರ್ತಿಸಿದ್ದರು ‘ ಎಂದಿದ್ದಾರೆ. ( Clown – Joker, baffoon, Comedian )

Image result for clown virat tweet harris

 

 

ಪ್ರಸಕ್ತ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ವೇಗದ ಬೌಲರ್ ಕಗಿಸೋ ರಬಾಡಾ ಹಾಗೂ ಆಸೀ ನಾಯಕ ಸ್ಟೀವ್ ಸ್ಮಿತ್ ನಡುವೆ ವಿವಾದ ಉಂಟಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸಿ ಲೆವೆಲ್ – 2 ಅಪರಾಧ & ಐಸಿಸಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ರಬಾಡಾ ಅವರನ್ನು 2 ಪಂದ್ಯಗಳಿಂದ ಅಮಾನತು ಮಾಡಲಾಗಿತ್ತು.

Image result for Kagiso Rabada Steve Smith

ಇದರಿಂದ ಅಸಮಾಧಾನಗೊಂಡಿರುವ ಪಾಲ್ ಹ್ಯಾರಿಸ್, ಈ ಪ್ರಕರಣದಲ್ಲಿ ಅನವಶ್ಯಕವಾಗಿ ಕೊಹ್ಲಿಯವರ ಹೆಸರನ್ನು ಎಳೆತಂದಿದ್ದಾರೆ. ‘ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ Clown ನಂತೆ ವರ್ತಿಸಿದ್ದರು, ಆದರೂ ಕೊಹ್ಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಐಸಿಸಿಗೆ ರಬಾಡಾ ಅಥವಾ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಜೊತೆ ಏನೋ ತೊಂದರೆಯಿದ್ದಂತಿದೆ ‘ ಎಂದು ಬರೆದಿದ್ದಾರೆ.

Image result for clown virat tweet harris

Leave a Reply

Your email address will not be published.