ನನ್ನ ಮಗ ಟಿಕೆಟ್ ಕೇಳಿಲ್ಲ, ಜನರ ಅಪೇಕ್ಷೆ ಮೇರೆಗೆ ಚುನಾವಣೆಗೆ ನಿಲ್ತಿದ್ದಾನೆ : CM

ಚಿತ್ರದುರ್ಗ : ನನ್ನ ಮಗ ಚುನಾವಣೆಯಲ್ಲಿ ಟಿಕೆಟ್ ಕೇಳಿಲ್ಲ. ಆದರೆ ಜನರ ಅಪೇಕ್ಷೆ ಮೇರೆಗೆ ಚುನಾವಣೆ ಕಣಕ್ಕಿಳಿಯಲು ತೀರ್ಮಾನ ಮಾಡಿದ್ದಾಗಿ ಸಿ ಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಟಿಕೆಟ್ವೀ‌ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ವೀಕ್ಷಕರ ಸರ್ವೆ ಮೇರೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕೆಲವು ಮಠಾಧೀಶರು ಹಾಗೂ ಶಾಸಕರ ಮಕ್ಕಳೂ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಸಭೆಯಲ್ಲಿ ಚರ್ಚಿಸಿ ಬಳಿಕ ಮುಂದಿನ ತೀರ್ಮಾನ ಮಾಡುವುದಾಗಿ ಸಿಎಂ ಹೇಳಿದ್ದಾರೆ.

ಇನ್ನು ಇದೇ ವೇಳೆ ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಪ್ರತಿಕ್ರಿಸಿದ್ದು, ಪ್ರತ್ಯೇಕ ಧರ್ಮ ರಚಿಸುವ ಅಗತ್ಯವಿಲ್ಲ ಎಂದು ಮಠಾಧೀಶರು ಹೇಳಿದ್ದಾರೆ. ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಅವರು ಈಶ್ವರಪ್ಪ ಅವರಿಗೆ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ. ಈ ಯಡಿಯೂರಪ್ಪ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಿಕೊಂಡೇ ಕೆಲಸ ಸಾಧಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರ ಆಟ ನಡೆಯುವುದಿಲ್ಲ ಎಂದಿದ್ದಾರೆ. ಜೊತೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದೆ. ಅಲ್ಲಿ ಸಲ್ಲದವರು ಇಲ್ಲಿಯೂ ಸಲ್ಲುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com