ಚಿಕ್ಕ ಕಂದಮ್ಮನನ್ನು ಕೋಣೆಯಲ್ಲಿ ಬಿಟ್ಟು ನೇಣಿಗೆ ಶರಣಾದ 6 ತಿಂಗಳ ಗರ್ಭಿಣಿ

ಬೆಂಗಳೂರು : ಎಟಿಐನಲ್ಲಿ ಉದ್ಯೋಗದಲ್ಲಿದ್ದ ಆರು ತಿಂಗಳ ಗರ್ಭಿಣಿಯೋರ್ವರು ನೇಣಿಗೆ ಶರಣಾದ ಘಟನೆ ಶ್ರೀರಾಂಪುರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮೈಸೂರು ನಿವಾಸಿ ಮಹೇಶ್ ಎಂಬುವವರ ಪತ್ನಿ ನಾಗಲಾಂಬಿಕಾ ಎಂದು ಗುರುತಿಸಲಾಗಿದ್ದು, ಇವರು ಎಟಿಐನಲ್ಲಿ ಉದ್ಯೋಗದಲ್ಲಿದ್ದರು.

ಇವರು ಕಳೆದ ರಾತ್ರಿ ಮನೆಯಲ್ಲಿ ತನ್ನ ರೂಮಿನಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಇವರಿಗೆ ಮೊದಲ ಮಗು ಕೂಡ ಇದೆ ಎನ್ನಲಾಗಿದ್ದು, ಮಗುವನ್ನು ಕೋಣೆಯಲ್ಲಿ ಬಿಟ್ಟು ನೇಣಿಗೆ ಶರಣಾಗಿದ್ದಾರೆ. ಅಲ್ಲದೆ ಈಕೆ ಈಗ ಮತ್ತೆ ಆರು ತಿಂಗಳ ಗರ್ಭಿಣಿಯೂ ಆಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಶೋಕಪುರಂ ಠಾಣಾ ಇನ್ಸಪೆಕ್ಟರ್ ಸಿದ್ದರಾಜು ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com