UP & Bihar ಉಪಚುನಾವಣೆ : ಬಿಜೆಪಿಗೆ ಮುಖಭಂಗ : SP, RJD ಪಕ್ಷಗಳಿಗೆ ಜಯದ ಸಿಹಿ

ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮುಖಭಂಗ ಅನುಭವಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ಮೇಲುಗೈ ಸಾಧಿಸಿವೆ.

ಉತ್ತರ ಪ್ರದೇಶದ ಗೋರಖಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಹಾಗೂ ಫುಲ್ಪುರ್ ಕ್ಷೇತ್ರದಿಂದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಗೆಲುವು ಪಡೆದಿದ್ದಾರೆ.

ಬಿಹಾರದ ಅರಾರಿಯಾ ಕ್ಷೇತ್ರದಲ್ಲಿ ಆರ್ ಜೆಡಿ ಪಕ್ಷದ ಸರ್ಫರಾಜ್ ಆಲಮ್ ಹಾಗೂ ಜೆಹಾನಾಬಾದ್ ನಲ್ಲಿ ಕುಮಾರ್ ಕೃಷ್ಣ ಮೋಹನ್ ಯಾದವ್ ಜಯ ಸಾಧಿಸಿದ್ದಾರೆ. ಎರಡೂ ರಾಜ್ಯಗಳ ಒಟ್ಟು 5 ಸ್ಥಾನಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲ್ಲುವಲ್ಲಿ ಸಫಲವಾಗಿದೆ. ಬಿಹಾರದ ಭಬುವಾ ಕ್ಷೇತ್ರದಲ್ಲಿ ಬಿಜೆಪಿಯ ರಿಂಕಿ ರಾಣಿ ಪಾಂಡೆ ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com