ತ್ರಿಪುರಾದಲ್ಲಿ ಗೋಮಾಂಸ ನಿಷೇಧ ಸಾಧ್ಯವಿಲ್ಲ ಎಂದ BJP ಮುಖಂಡ !

ಅಗರ್ತಲಾ : ತ್ರಿಪುರಾದಲ್ಲಿ ಬಹುಸಂಖ್ಯಾತ ಜನರ ಆಹಾರ ಪದ್ದತಿಯಲ್ಲಿ ಗೋಮಾಂಸ ಸೇರಿ ಹೋಗಿದೆ ಆದ್ದರಿಂದ  ಗೋಮಾಂಸ ನಿಷೇಧ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಸುನಿಲ್‌ ದಿಯೋಧರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಬಹುತೇಕ ಮಂದಿ ಕ್ರೈಸ್ತರು ಹಾಗೂ ಮುಸ್ಲೀಮರಿದ್ದಾರೆ. ಅಲ್ಲದೆ ಕೆಲ ಹಿಂದೂಗಳು ಗೋಮಾಂಸ ಸೇವಿಸುತ್ತಾರೆ. ಆದ್ದರಿಂದ ಗೋಮಾಂಸ ನಿಷೇಧ ಸಾಧ್ಯವಿಲ್ಲ. ಗೋಮಾಂಸ ನಿಷೇಧ ಜಾರಿ ಮಾಡುವಾಗ ಜನರ ಭಾವನೆಗಳನ್ನು ಗೌರವಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಜನರ ಆದ್ಯತೆಗೆ ತಕ್ಕಂತೆ ನಾವೂ ಹೊಂದಿಕೊಂಡು ಹೋಗಬೇಕಾಗುತ್ತದೆ ಎಂದಿದ್ದಾರೆ.

ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್‌ ದಿಯೋಧರ್ ಗೆಲುವಿನ ರೂವಾರಿಯಾಗಿದ್ದು, ಈಗ ಗೋಮಾಂಸ ನಿಷೇಧ ಮಾಡಬೇಕು ಎನ್ನುತ್ತಿರುವ ಮುಖಂಡರೇ ನಿಷೇಧ ಬೇಡ ಎನ್ನುತ್ತಿರುವುದು ವಿಪರ್ಯಾಸ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭವಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ನಾಯಕರೊಬ್ಬರು ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಮಾಂಸ ನಿಷೇಧಿಸುವುದಿಲ್ಲ. ಆದರೆ ಕಸಾಯಿಖಾನೆಗಳನ್ನು ನಿಯಂತ್ರಿಸುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗೋಮಾಂಸ ನಿಷೇಧ ವಿಚಾರವನ್ನು ತನ್ನ ರಾಜಕೀಯ ಅಜೆಂಡಾ ಆಗಿ ಗುರುತಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com