ಅಪ್ಪುನ ಬಿಂದಾಸ್‌ ಹುಡುಗಿ ಹಂಸಿಕಾಗೆ ಎದುರಾಯ್ತು ಸಂಕಷ್ಟ : ಅಷ್ಟಕ್ಕೂ ಆಗಿದ್ದೇನು ?

ದಕ್ಷಿಣ ಭಾರತ ಖ್ಯಾತ ನಟಿಯೊಬ್ಬರ ಮೇಲೆ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿದ್ದ ಹಂಸಿಕಾ ವಿರುದ್ಧ ಅವರ ಮ್ಯಾನೇಜರ್‌ ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ತಮಿಳುನಾಡು ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.

ನಾನು ಅನೇಕ ವರ್ಷಗಳಿಂದ ಹನ್ಸಿಕಾ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಆದರೆ ಅನೇಕ ದಿನಗಳಿಂದ ಅವರು ನನಗೆ ಸಂಬಳ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಚಿತ್ರರಂಗದವರ ಪ್ರಕಾರ ಹಂಸಿಕಾ ಸಿನಿಮಾ ಕರಿಯರ್‌ ಶುರು ಮಾಡಿದಾಗಿನಿಂದಲೂ ಹನ್ಸಿಕಾ ಅವರ ತಾಯಿ ಮೋನಾ ಮೊಟ್ಟಾನಿ ಅವರೇ ಸಿನಿಮಾದ ಡೇಟ್‌, ಸಂಭಾವನೆಗೆ ಸಂಬಂಧ ಪಟ್ಟಂತೆ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮ್ಯಾನೇಜರ್ ಮಾಡಿರುವ ಆರೋಪದ ಬಗ್ಗೆ ಹಂಸಿಕಾ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಮ್ಯಾನೇಜರ್ ಮುನಿಸ್ವಾಮಿ ಹೇಳಿದ್ದು ಸತ್ಯ ಎಂದು ಸಾಬೀತಾದರೆ ತಮಿಳುನಾಡು ಕಲಾವಿದರ ಸಂಘದ ಎದುರು ಹಂಸಿಕಾ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಲಾಗುತ್ತಿದೆ.

ಹಂಸಿಕಾ ಕನ್ನಡದಲ್ಲಿ ಪುನೀತ್‌ ರಾಜ್‌ ಕುಮಾರ್ ಅವರ ಜೊತೆ ಬಿಂದಾಸ್‌ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿಸಿದ್ದು, ಸಂಬಳದ ವಿಚಾರಕ್ಕೆ ಮ್ಯಾನೇಜರ್‌ ಹಂಸಿಕಾರನ್ನು ಮತ್ತೆ ಸುದ್ದಿಗೆ ತಂದಿದ್ದಾರೆ.

Leave a Reply

Your email address will not be published.