ಸಿದ್ದರಾಮಯ್ಯನವರೇ, ತಾಕತ್ ಇದ್ದರೆ RSS ಬ್ಯಾನ್ ಮಾಡಿ : ಕೆ.ಎಸ್ ಈಶ್ವರಪ್ಪ ಸವಾಲ್

 

ದಾವಣಗೆರೆಯಲ್ಲಿ ಭಾರತೀಐ ಜನತಾ ಪಕ್ಷದ ಮುಖಂಡ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ‘ ಯಡಿಯೂರಪ್ಪನವರಿಗೆ ಅಮಿತ್ ಷಾ ಮತ್ತು ನರೇಂದ್ರ ಮೋದಿಯವರಿಗೆ ಬೈಯೋಕೆ ಸರ್ಕಾರದ ಹಣದಲ್ಲಿ ಸಾಧನಾ ಸಮಾವೇಶ ಮಾಡ್ತಿದ್ದಾರೆ ಸಿಎಂ ಸಿದ್ದರಾಮಯ್ಯನವರು. ಇವತ್ತಲ್ಲ ನಾಳೆ ರಾಜ್ಯಸಬೆಯಲ್ಲಿ ಬಿಜೆಪಿ ಬಹುಮತ ಬಂದೇ ಬರುತ್ತೆ. ಬಡವರು ಮನೆ ಕಟ್ಟಲು ಮರಳು‌ ಕೊಡ್ತಿಲ್ಲ ‘ ಎಂದಿದ್ದಾರೆ.

‘ ಆದರೆ ಸಿಎಂ ಸಿದ್ದರಾಮಯ್ಯನವರು ಮರಳನ್ನು ಲೂಟಿ ಮಾಡ್ತಿದ್ದಾರೆ. ನೆಮ್ಮದಿಯಿಂದ ಬದುಜೋಕು ಬಿಡಲ್ಲ, ಜಾತಿ ಜಾತಿಗಳ ನಡುವೆ ಬೆಂಕಿ ಇಟ್ಟುಬಿಟ್ಟೀದ್ದೀರಿ. ಜಾತಿ ಮತ್ತು ಧರ್ಮದ ಹೆಸರಿಲ್ಲದೇ ಇಷ್ಟೊಂದು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಂದಿದೆ ‘ ಎಂದರು.

‘ ಹಿಂದೂ ಯುವಕರ ಕಗ್ಗೊಲೆ ನಡೆಯುತ್ತಿದೆ ಈ ಅಮಾಯಕ ಯುವಕರು ಏನು ಮಾಡಿದ್ದಾರೆ, ನೀವೇನು ಕಣ್ಮುಚ್ಚಿ ಕುಳಿತಿದ್ದೀರಾ ಸಿದ್ದರಾಮಯ್ಯನವರೇ. ರಾಷ್ಟದ್ರೋಹಿಗಳಿಗೆ ಶಿಕ್ಷೆ ಕೊಡಿ. ಅಮಾಯಕರಿಗೆ ಮೋಸ ಮಾಡಬೇಡಿ’. ಆರ್ ಎಸ್ ಎಸ್ ನ್ನು ಮಟ್ಟಹಾಕಲು ನೀನು ಯಾವುರ ದಾಸಯ್ಯ. ತಾಕತ್ ಇದ್ದರೆ ಆರ್ ಎಸ್ ಎಸ್ ನ್ನು ಬ್ಯಾನ್ ಮಾಡು ‘ ಅಂತ ಸವಾಲ್ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com