ಅನಂತ್‌ ಕುಮಾರ್‌ ಹೆಗಡೆ ಮಾತು ಕೇಳ್ತಿದ್ರೆ ಅವರು ಹಿಂದೂನೇ ಅಲ್ಲ ಅನ್ಸುತ್ತೆ : HDK

ಶಿರಸಿ : ಅನಂತ್ ಕುಮಾರ್ ಹೆಗಡೆ ಭಾಷೆ ಕೇಳಿದರೆ ಅವರು ಹಿಂದುವೇ ಅಲ್ಲ ಎನಿಸುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ಉತ್ತರ ಕನ್ನಡ ಜಲ್ಲೆಯ ಶಿರಸಿಯಲ್ಲಿ ನಮ್ಮೊಂದಿಗೆ ಕುಮಾರಸ್ವಾಮಿ ಸಂವಾದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ನಮಸ್ಕಾರ ಮಾಡಿಲ್ಲ ಎಂದು ರೈತನ ಮೇಲೆ ಹಲ್ಲೆ ಮಾಡಿರೋದು ಖಂಡನೀಯ. ಈರೀತಿ ಹೆದರಿಸಿ ದಬ್ಬಾಳಿಕೆಯಿಂದ ಯಾರನ್ನೂ ಗೆಲ್ಲಲಾಗದು.  ಕಾಂಗ್ರೆಸ್ ಪಕ್ಷದಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದೊಂದು ದರಿದ್ರ ಸರ್ಕಾರ. ಇಲ್ಲಿ ಜನರಿಗೆ, ಮಹಿಳೆಯರಿಗೆ ಭದ್ರತೆ ಇಲ್ಲ. ಸರ್ಕಾರದಂತೆ ಅಧಿಕಾರಿಗಳೂ ಜನರ ಮೇಲೆ ದಬ್ಬಾಳಿಕೆ ಮಾಡೋದು ಸರಿಯಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡಲಿ. ಅದನ್ನು ಬಿಟ್ಟು ಸರ್ಕಾರದ ಏಜೆಂಟ್ ಆದ್ರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅನಂತ್ ಕುಮಾರ್ ಹೆಗಡೆಗೆ ಯಾವ ರೀತಿ ಮಾತಾಡಬೇಕೆನ್ನುವ ಅರಿವಿಲ್ಲ. ಬಿಜೆಪಿಯ ಪ್ರಚಾರಕ್ಕೆ ಯೋಗಿ ಆದಿತ್ಯ ನಾಥ್ ಬರೋದು ವಿಪರ್ಯಾಸ. ಉತ್ತರ ಪ್ರದೇಶದಲ್ಲೇ ಅಭಿವೃದ್ದಿ ಪರಿವರ್ತನೆ ಇಲ್ಲ. ಇಲ್ಲಿ ಬಂದು ಪರಿವರ್ತನೆ ಮಾಡೋದು ಏನು? ಎಂದು ಬಿಜೆಪಿಯ ಯಾತ್ರೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com