All England Open : ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ ಸೈನಾ ನೆಹ್ವಾಲ್

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಮೊದಲ ಸುತ್ತಿನಲ್ಲಿಯೇ ಸೋತು ಹೊರನಡೆದಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಚೀನಾದ ತ್ಸು ಇಂಗ್ ಟಾಯ್ ಅವರ ವಿರುದ್ಧ ಸೋತು ಸೈನಾ ನೆಹ್ವಾಲ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

4ನೇ ಶ್ರೇಯಾಂಕಿತ ಸೈನಾ ನೆಹ್ವಾಲ್ 21-14, 21-18 ಪಾಯಿಂಟ್ ಗಳಿಂದ ತ್ಸು ಇಂಗ್ ಟಾಯಿ ವಿರುದ್ಧ ಸೋಲನುಭವಿಸಿದರು. ಸೈನಾ ನೆಹ್ವಾಲ್ ಹಾಗೂ ತ್ಸು ಇಂಗ್ ಟಾಯ್ ಇಬ್ಬರೂ ಇದುವರೆಗೆ 15 ಬಾರಿ ಮುಖಾಮುಖಿಯಾಗಿದ್ದು, 10 ಬಾರಿ ಚೈನಾ ಆಟಗಾರ್ತಿ ಜಯಶಾಲಿಯದ್ದರೆ, 5 ಸಲ ಸೈನಾ ಗೆಲುವು ಗಳಿಸಿದ್ದಾರೆ.

Leave a Reply

Your email address will not be published.