ಬೆಂಗಳೂರಿನ ಇನ್ವೆಸ್ಟ್ ಮೆಂಟ್ ಕಂಪನಿಯಿಂದ ದ್ರಾವಿಡ್, ಸೈನಾ ಸೇರಿ ಹಲವರಿಗೆ ಮೋಸ

ಬೆಂಗಳೂರಿನ ಇನ್ವೆಸ್ಟ್ ಮೆಂಟ್ ಕಂಪನಿಯೊಂದರ ಜಾಲಕ್ಕೆ ಸಿಲುಕಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವು ಜನರು ಮೋಸ ಹೋಗಿದ್ದಾರೆ. ಅನೇಕ ಜನ ಸೆಲೆಬ್ರಿಟಿಗಳು ಸೇರಿ 1776 ಜನರು ಕಂಪನಿಯಿಂದ ನೂರಾರು ಕೋಟಿ ಮೋಸ ಹೋಗಿದ್ದಾರೆ ಎಂದು ಮಂಗಳವಾರ ಪೋಲೀಸರು ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನ ವಿಕ್ರಮ್ ಇನ್ವೆಸ್ಟ್ ಮೆಂಟ್ ಕಂಪನಿ ಬಹುಕೋಟಿ ವಂಚನೆ ನಡೆಸಿದೆ. ಪೋಲೀಸರ ಪ್ರಕಾರ ಇದರಲ್ಲಿ ರಾಹುಲ್ ದ್ರಾವಿಡ್ ಹಾಗೂ ಪರಿವಾರದ ಸದಸ್ಯರು 35 ಕೋಟಿ ಹೂಡಿಕೆ ಮಾಡಿದ್ದರು, ನಂತರ 20 ಕೋಟಿ ರೂಪಾಯಿಗಳನ್ನು ಮರಳಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸ್ವತಃ ರಾಹುಲ್ ದ್ರಾವಿಡ್ ಕಳೆದ 6 ವರ್ಷಗಳಲ್ಲಿ ಈ ಕಂಪನಿಯಲ್ಲಿ ಸುಮಾರು 20 ಕೋಟಿ ಹೂಡಿಕೆ ಮಾಡಿ ನಂತರ 12 ಕೋಟಿಗಳನ್ನು ಹಿಂತಿರುಗಿ ಪಡೆದಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ 1.5 ಕೋಟಿ ಹೂಡಿ, 17 ಲಕ್ಷ ಹಿಂದಕ್ಕೆ ಪಡೆಯುವಲ್ಲಿ ಸಫಲರಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com