ದನ ಹಿಂದೂ ಆದದ್ದು ಯಾವಾಗ? ಹಂದಿ ಮುಸ್ಲಿಂ ಆದದ್ದು ಯಾವಾಗ ? : ಪ್ರಕಾಶ್ ರೈ ಪ್ರಶ್ನೆ

ಮಂಗಳೂರು :  ಸಚಿವ ಅನಂತ್‌ ಕುಮಾರ್‌ ಹಗಡೆ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಧಿಕ್ಕಾರ ಧಿಕ್ಕಾರ ಎಂದು ಕೂಗುವ ಬದಲು ಅಂಬಾ ಅಂಬಾ ಎಂದು ಕೂಗಿ ನಗೆಪಾಟಲಿಗೀಡುಮಾಡಬೇಕು ಎಂದು ನಟ ಪ್ರಕಾಶ್‌ ರೈ ಸೂಚಿಸಿದ್ದಾರೆ.

ಮಂಗಳೂರು ಅಲೋಷಿಯಸ್‌ ಕಾಲೇಜು ವಿದ್ಯಾರ್ಥಿ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ, ಸಂವಿಧಾನ ವಿರೋಧಿ ಹೇಳಿಕೆ ನೀಡುವವರಿಗೆ ಇದೇ ತರ ಕೂಗಿ ಮುಜುಗರ ಮಾಡಬೇಕು. ದನ ಹಿಂದೂ ಆದದ್ದು ಯಾವಾಗ ಹಂದಿ ಮುಸ್ಲಿಂ ಆದದ್ದು ಯಾವಾಗ ?, ತೆಂಗಿನ ಕಾಯಿ ಹಿಂದೂ ಆದದ್ದು ಖರ್ಜೂರ ಮುಸ್ಲಿಂ ಆದದ್ದು ಯಾವಾಗ ?,ಇಂತಹಾ ಏಕ ಸಂಸ್ಕೃತಿಗೆ ಉಳಿಗಾಲವಿಲ್ಲ . ಹಿಟ್ಲರ್ ಏಕ ಸಂಸ್ಕೃತಿ ಪ್ರತಿಪಾದಿಸಿ ಸಾವಿರಾರು ಜನರ ಸಾವಿಗೆ ಕಾರಣನಾದ. ಕೊನೆಗೆ ಅದಕ್ಕೆ ಅವನೇ ಬಲಿಯಾಗಬೇಕಾಯಿತು ಎಂದಿದ್ದಾರೆ.

ಇದೇ ವೇಳೆ ವಿವೇಕಾನಂದ ಕಾಲೇಜಿಗೆ ಅಮಿತ್ ಶಾ ಬಂದಿದ್ದಾಗ ಅದನ್ನು ವಿರೋಧಿಸಿ ವಿದ್ಯಾರ್ಥಿಯೊಬ್ಬ ಅಮಿತಾ ಶಾ ಬಂಡಲ್‌ ಎಂದು ಬರೆದಿದ್ದಕ್ಕೆ ಕಾಲೇಜಿನಿಂದ ಅಮಾನತು ಮಾಡಿದ ಪ್ರಕರಣ ಸಂಬಂಧ, ನನ್ನ ಬಳಿ ದಾಖಲೆಯಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅಂದಮೇಲೆ ವಿದ್ಯಾರ್ಥಿಯನ್ನು ಅಮಾನತು ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com