ಸಾಲ ಮರುಪಾವತಿಸದ ಹಿನ್ನೆಲೆ : ರೈತನ ಮನೆಯನ್ನೇ ದೋಚಿದ ಬ್ಯಾಂಕ್ ಸಿಬ್ಬಂದಿ !!

ಕೊಪ್ಪಳ : ರೈತನೋರ್ವ ಬ್ಯಾಂಕ್ ಸಾಲ ಮರು ಪಾವತಿಸಿದ ಹಿನ್ನಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು, ರೈತ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋದ ಘಟನೆ ಕೊಪ್ಪಳದಲ್ಲಿ ನದೆದಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರೈತ ವಿಷ್ಣುವರ್ಧನ್ ರೆಡ್ಡಿ ಇದೀಗ ಬ್ಯಾಂಕಿನವರ ಮೋಸಕ್ಕೆ ಕಾರಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ವಿಷ್ಣುವರ್ಧನ್ ರೆಡ್ಡಿ ಹೈನುಗಾರಿಕೆ ಸಲುವಾಗಿ ರಾಯಚೂರು ಜಿಲ್ಲೆಯ ಸಿಂಧನೂರು ಸುಕೋ ಬ್ಯಾಂಕ್ ನಲ್ಲಿ 7 ವರ್ಷದ ಹಿಂದೆ ಸಾಲ ಪಡೆದಿದ್ದ. ಆದ್ರೆ ಸಾಲ ಮರುಪಾವತಿ ಮಾಡಲು ವಿಷ್ಣವರ್ಧನ್ ರೆಡ್ಡಿಗೆ ಆಗಿರಲಿಲ್ಲ. ಇದ್ರಿಂದ ವಿಷ್ಣವರ್ಧನ ರೆಡ್ಡಿ ಮನೆಯಲ್ಲಿ ಇಲ್ಲಿದಿರುವುದನ್ನು ಗಮನಿಸಿದ ಬ್ಯಾಂಕಿನವರು ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳ ಸಮೇತ ವಸ್ತುಗಳನ್ನು ತೆಗದುಕೊಂಡು ಮನೆಯನ್ನು ಜಪ್ತಿ ಮಾಡಿದ್ದಾರೆ. ಇದ್ರಿಂದ ಆಕ್ರೋಶಗೊಂಡ ವಿಷ್ಣವರ್ಧನ ರೆಡ್ಡಿ, ನಮ್ಮ ಕುಟುಂಬ ಮನೆಯಲ್ಲಿದ್ದಾಗ ಕೋರ್ಟ್ ಆದೇಶ ತಂದು ಮನೆಯನ್ನು ಜಪ್ತಿ ಮಾಡಬಹುದಿತ್ತು. ಆದ್ರೆ ಈಗ ಯಾವುದೇ ಕೋರ್ಟ್ ಆದೇಶ ತರದೇ ನಾನು ಮನೆಯಲ್ಲಿ ಇಲ್ಲದನ್ನು ಗಮನಿಸಿ ಸಾಲಕ್ಕಿಂತ ಹೆಚ್ಚು ಬೆಲೆಬಾಳುವ ಆಭರಣಗಳನ್ನು ಬ್ಯಾಂಕಿನವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com