ಬಿಳಿ ಕಚ್ಚೆ ಪಂಚೆ ಉಟ್ಟು, ರಗಡ್‌ ಲುಕ್‌ನಲ್ಲಿ ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ….!!

ದಿ ವಿಲನ್‌ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಕಿಚ್ಚ ಸುದೀಪ್‌ ತಮ್ಮ ಲುಕ್ಕನ್ನೇ ಬದಲಿಸಿಕೊಂಡಿದ್ದಾರೆ. ಹೌದು ಅದೂ ಆ್ಯಂಗ್ರಿ ಯಂಗ್‌ ಮನ್‌ ಲುಕ್‌ನಲ್ಲಿ.  ಆದರೆ ಇವರು ಮಾಡುತ್ತಿರುವುದು ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಪಾತ್ರ.

ಹೌದು ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅಂಬರೀಶ್‌ ಅವರ ಹಿಂದೆ ಹೇಗಿದ್ದರು ಎಂಬ ಅಂಬಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದರಂತೆ ಕಿಚ್ಚ ಮೊದಲ ದಿನದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು ಬಿಳಿ ಕಚ್ಚೆ ಪಂಚೆಯುಟ್ಟು, ರಗಡ್‌ ಲುಕ್‌ನಲ್ಲಿ ಕಬ್ಬಡ್ಡಿ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಅಂಬರೀಶ್ ನಟಿಸೋಕೆ ಒಪ್ಪಿಕೊಂಡಿರುವುದೇ ಸುದೀಪ್‌ ಕಾರಣದಿಂದ. ಚಿತ್ರದಲ್ಲಿ ಅಂಬರೀಶ್‌ ಯುವಕನಾಗಿದ್ದಾಗ ಹೇಗಿದ್ದರೋ ಆ ಪಾತ್ರವಲ್ಲ ಸುದೀಪ್ ಮಾಡುತ್ತಿದ್ದಾರೆ.

ಮಂಗಳವಾರ ರಾತ್ರಿ ಕಿಚ್ಚ ಕಬ್ಬಡ್ಡಿ ಸೆಟ್‌ನಲ್ಲಿ ಯಂಗ್ ಅಂಬರೀಶ್ ಆಗಿ ಮಿಂಚಿದ್ರು. ಈ ಬಗ್ಗೆ ಕಿಚ್ಚ ಟ್ವೀಟ್‌ ಮಾಡಿದ್ದು, ಅಂಬಿ ನನಗೆ ವಯಸ್ಸಾಯ್ತೋ ಸಿನಿಮಾ ಸೆಟ್‌ಗೆ ಬಂದಿದ್ದು ಸಂತೋಷವಾಗುತ್ತಿದೆ. ನಿತ್ರದ ನಿರ್ದೇಶಕ ಗುರುದತ್‌ ಗಾಣಿಗ, ಸಹ ನಿರ್ದೇಶಕ ಸಂಚಿತ್‌ ಕೆಲಸ ನೋಡಿ ಖುಷಿಯಾಗಿದೆ ಎಂದು ಸುದೀಪ್‌ ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com