ತಾನು ಬಂದಾಗ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ವೃದ್ದ ರೈತನಿಗೆ ಥಳಿಸಿದ ಕೈಶಾಸಕರ ಆಪ್ತ !

ಕಲಬುರಗಿ : ತಾಲ್ಲೂಕು ಪಂಚಾಯ್ತಿಯ ಮಾಜಿ ಸದಸ್ಯ ಬಂದಾಗ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಅಮಾಯಕ ರೈತರ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸೀತಾರಾಮ ಸುಬೇದಾರ್‌ ಮತ್ತು ಬೆಂಬಲಿಗರು ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಥಳಿತಕ್ಕೊಳಗಾದ ರೈತನನ್ನು ಲಕ್ಕಪ್ಪ ಎಂದು ಹೆಸರಿಸಲಾಗಿದೆ.

ಕಲಬುರಗಿ ತಾಲ್ಲೂಕಿನ ಹಸನಾಪುರ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸೀತಾರಾಮ ಸುಬೇದಾರ್‌ ಕಾರಿನಲ್ಲಿ ಆಗಮಿಸಿದ್ದರು. ಕಾರು ಬಂದಾಗ ರೈತ ಲಕ್ಕಪ್ಪ ಎದ್ದು ನಿಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ವೃದ್ದ ಲಕ್ಕಪ್ಪ ಮೇಲೆ ಸೀತಾರಾಮ ಸುಬೇದಾರ್‌ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಲಕ್ಕಪ್ಪನನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಸೀತಾರಾಮ ಸುಬೇದಾರ್‌ ವಿರುದ್ದ ಫರತಾಬಾದ್‌ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈತನ ಹೆಸರು ರೌಡಿ ಶೀಟರ್‌ ಪಟ್ಟಿಯಲ್ಲೂ ಇದ್ದು, ಈತ ಶಾಸಕ ಮಾಲಿಕಯ್ಯ ಗುತ್ತೇದಾರ್‌ ಆಪ್ತ ಎಂದು ಮೂಲಗಲು ತಿಳಿಸಿವೆ.

 

Leave a Reply

Your email address will not be published.

Social Media Auto Publish Powered By : XYZScripts.com