ಹೈಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾ : ನಲಪಾಡ್‌ಗೆ ಜೈಲೇಗತಿ

ಬೆಂಗಳೂರು : ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿದೆ.

ಹೈಕೋರ್ಟ್‌ನಲ್ಲೂ ಜಾಮೀನು ಸಿಗದ ಹಿನ್ನೆಲೆಯ ನಲಪಾಡ್‌ಗೆ ಜೈಲೇ ಗತಿಯಾಗಿದೆ. ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ವಿದ್ವತ್‌ ಪರ ಎಸ್‌ಪಿಪಿ ಶ್ಯಾಮಸುಂದರ್‌ ವಾದ ಮಂಡಿಸಿದರೆ, ನಲಪಾಡ್‌ ಪರ ಹಿರಿಯ ವಕೀಲರಾದ ಸಿ.ವಿ ನಾಗೇಶ್‌ ವಾದ ಮಂಡಿಸಿದ್ದರು. ವಾದ ಆಲಿಸಿದ್ದ ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಎರಡು ದಿನಗಳ ಹಿಂದೆ ತೀರ್ಪು ಕಾಯ್ದಿರಿಸಿದ್ದರು.

ಸಿಸಿಟಿವಿಯಲ್ಲಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳಿಗೆ ಸಿಗದ ವಿದ್ವತ್‌ ಡಿಸ್ಚಾರ್ಜ್‌ ಮಾಹಿತಿ ಆರೋಪಿಯ ತಂದೆಗೆ ಸಿಕ್ಕಿರುವುದು ಅನುಮಾನ ಮೂಡಿಸಿದೆ ಎಂದು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರರಿದ್ದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

Leave a Reply

Your email address will not be published.