BJP ಕಾರ್ಯಕರ್ತರೇ…..ಯೋಧರಂತೆ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ : ಶ್ರೀರಾಮುಲು

ಬಳ್ಳಾರಿ : ಜಿಲ್ಲೆಯ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ನವಶಕ್ತಿ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಶ್ರೀರಾಮುಲು, ತುಂಗಭದ್ರಾ ‌ಜಲಾಶಯ ಉಳಿಸಿಕೊಳ್ಳಬೇಕಾದರೆ ಹೂಳು ಎತ್ತಬೇಕು. ಕಾಂಗ್ರೆಸ್ ಕೈಯಲ್ಲಿ ಆ ಕೆಲಸ ಆಗಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಸಮಾನಾಂತರ ಜಲಾಶಯ ಮಾಡುತ್ತೇವೆ. ಶ್ರೀರಾಮುಲು‌ ಮುಗಿಸಬೇಕು ಎಂದು ಸ್ಕೆಚ್‌ ಹಾಕಿದ್ರು,  ಆದ್ರೆ ಕಾರ್ಯಕರ್ತರು ನನ್ನ ಕೈಬಿಡಲಿಲ್ಲ.

ಮಣ್ಣಲ್ಲಿ ಮಣ್ಣಾಗೋವರೆಗೂ ಗ್ರಾಮಾಂತರ ಕ್ಷೇತ್ರವನ್ನು ನಾನು ಮರೆಯಲ್ಲ. ನನ್ನನ್ನು ಗ್ರಾಮೀಣ ಕ್ಷೇತ್ರದಿಂದ ನಾಲ್ಕು ಬಾರಿ ಜನರು ಗೆಲ್ಲಿಸಿದ್ದಾರೆ. ಕಾಂಗ್ರೆಸನ್ನು ಬೇರು ಸಮೇತ ಕಿತ್ತುಹಾಕಬೇಕು, ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಸವಾಲು ಹಾಕುತ್ತೇನೆ. ಚುನಾವಣೆ ನಿಲ್ಲುತ್ತೇನೆ ಇಲ್ವೋ ಗೊತ್ತಿಲ್ಲ, ಅದರೆ ಪಕ್ಷಕ್ಕಾಗಿ ದುಡಿಯುತ್ತೇನೆ. ನಮ್ಮ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಕೇಸ್ ಒಪನ್ ಮಾಡ್ತಾ ಇದ್ದಾರೆ. ಎಷ್ಟು ಕೇಸ್ ಮಾಡ್ತಾರೊ ಮಾಡಲಿ, ಇನ್ನೂ 60 ದಿನ ಮಾತ್ರ ಮಾಡ್ತಾರೆ. ನಂತರ ಯಡಿಯೂರಪ್ಪ ಬಂದ ಮೇಲೆ ಎಲ್ಲಾ ಪ್ರಕರಣಗಳನ್ನು ವಜಾ ಮಾಡುತ್ತೇವೆ ಎಂದಿದ್ದಾರೆ.

ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡ್ತೇವೆ, ಸಮೀಕ್ಷೆ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಗೊತ್ತಾಗಿದೆ. ಕಾರ್ಯಕರ್ತರು ಯೋಧರಂತೆ ಕೆಲಸ ಮಾಡಿ. ಯಾರೇ ಅಭ್ಯರ್ಥಿಯಾದ್ರು ಗೆಲ್ಲಿಸಿ. ಸಣ್ಣ ಪಕೀರಪ್ಪರನ್ನು ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com