BJP ಯವರು ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದ್ರು ಹೊಂದಾಣಿಕೆ ಮಾಡಿಕೊಳ್ತಾರೆ : ಖಾದರ್‌

ಶಿವಮೊಗ್ಗ : ದೇಶವನ್ನ ಒಡೆದು ಪ್ರತ್ಯೇಕ ಮಾಡುವಂತಹ ಪ್ರತ್ಯೇಕವಾದಿಗಳ ಜೊತೆಯಲ್ಲಿ ಕೈ ಜೋಡಿಸಿದ ಬಿ.ಜೆ.ಪಿಯವರು ನಮಗೆ ಬುದ್ದಿಮಾತು ಹೇಳೋ ಅಗತ್ಯವಿಲ್ಲ ಎಂದು ಯು.ಟಿ ಖಾದರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮನ್ನು ಭಯೋತ್ಪಾದಕರು ಎನ್ನುವ ಬದಲು, ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಅಪ್ಘಾನಿಸ್ತಾನಕ್ಕೆ ಬಿಟ್ಟು ಬಂದವರು ಯಾವ ಪಕ್ಷದವರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಭಯೋತ್ಪಾದಕರಿಗೆ ಬೆಂಬ ಸೂಚಿಸುವ ಪಕ್ಷಗಳೊಂದಿಗೆ ಕೈ ಜೋಡಿಸಿರುವ ಬಿಜೆಪಿ, ಭಯೋತ್ಪಾದಕ ಪಕ್ಷ. ನಾವು ದೇಶ ಪ್ರೇಮಿಗಳು ಎಂದು ಹೇಳಿಕೊಳ್ಳುವ ಬಿಜೆಪಿ ಕಾಶ್ಮೀರದಲ್ಲಿ ಮೊದಲು ಪಿಡಿಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಡಲಿ. ಇವರಿಗೆ ಅಧಿಕಾರ ಸಿಗುತ್ತೆ ಅಂತಾದರೆ ಯಾರ ಜೊತೆಯಲ್ಲಾದ್ರು ಕೈ ಜೋಡಿಸುತ್ತಾರೆ.

ನಾಗಾಲ್ಯಾಂಡ್‌, ತ್ರಿಪುರಾ, ಅಸ್ಸಾಂನಲ್ಲಬ ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದ್ದಾರೆ. ಇದರ ಬಗ್ಗೆ ಬಿಜೆಪಿ ಮೊದಲು ಉತ್ತರ ಕೊಡಲಿ. ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜ್ಯದಲ್ಲಿ ಕಾರ್ಯಕರ್ತರನ್ನು ಉದ್ರೇಕಗೊಳಿಸಲು ಎಂತಹ ಹೇಳಿಕೆಗಳನ್ನಾದರೂ ನೀಡಲು ಸಿದ್ದರಿರುತ್ತಾರೆ. ಕೋಮುಗಲಭೆ ಸೃಷ್ಠಿಸುವುದೇ ಇವರ ಕೆಲಸ. ಆದರೆ ಇವರ ಪ್ರಯತ್ನಕ್ಕೆ ರಾಜ್ಯದ ಜನ ಸೊಪ್ಪು ಹಾಕುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com