ಕಿಚ್ಚ ಸುದೀಪ್‌ ಅವರನ್ನು ಸಿಕ್ಸ್‌ ಪ್ಯಾಕ್‌ನಲ್ಲಿ ನೋಡುವ ಆಸೆಯಂತೆ ಈ ನಟಿಗೆ !

ಸ್ಯಾಂಡಲ್‌ವುಡ್‌ನ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅವರು ಯಾವುದೇ ಡ್ರೆಸ್‌ ತೊಟ್ಟರೂ, ಯಾವುದೇ ರೀತಿ ಲುಕ್‌ನಲ್ಲಿ ಕಾಣಿಸಿಕೊಂಡರೂ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ಎಲ್ಲಾ ರೀತಿಯ ಲುಕ್‌ಗಳೂ ಅವರಿಗೆ ಒಪ್ಪುತ್ತದೆ.

ಬಹುತೇಕ ನಟಿಯರೂ ಸುದೀಪ್‌ ಅವರ ಸಿನಿಮಾದಲ್ಲಿ ನಟಿಸಲು ಬಯಸುತ್ತಾರೆ. ಅಲ್ಲದೆ ತಮ್ಮ ನೆಚ್ಚಿನ ನಟನನ್ನು ಒಂದೊಂದು ರೀತಿಯಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿರುತ್ತದೆ. ಅಂತೆಯೇ ಕನ್ನಡದ ನಟಿ ಮಾನ್ವಿತ ಸಹ ಸುದೀಪ್‌ ಅವರನ್ನು ಸಿಕ್ಸ್‌ಪ್ಯಾಕ್‌ನಲ್ಲಿ ನೋಡುವ ಆಸೆಪಟ್ಟಿದ್ದಾರೆ.

ಹೌದು ಅವರೇ ನಂ.1 ಯಾರಾ ವಿತ್‌ ಶಿವಣ್ಣ ಕಾರ್ಯಕ್ರಮದಲ್ಲಿ ಕೆಂಡಸಂಪಿಗೆ, ಟಗರು ಸಿನಿಮಾದಲ್ಲಿ ನಟಿಸಿದ್ದ ಮಾನ್ವಿತಾ ಅವರಿಗೆ ಸುದೀಪ್‌ ಅವರನ್ನು ಸಿಕ್ಸ್‌ಪ್ಯಾಕ್‌ನಲ್ಲಿ ನೋಡುವ ಆಸೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಶಿವರಾಜ್‌ ಕುಮಾರ್‌ ನೀವು ಯಾವ ನಟನನ್ನು ಸಿಕ್ಸ್‌ ಪ್ಯಾಕ್‌ನಲ್ಲಿ ನೋಡಲು ಇಷ್ಟಪಡುತ್ತೀರಾ ಎಂದು ಕೇಳಿದಾಗ ಮಾನ್ವಿತಾ ಸುದೀಪ್‌ ಹೆಸರು ಹೇಳಿದ್ದಾರೆ. ಸುದೀಪ್‌ ಪೈಲ್ವಾನ್‌ ಸಿನಿಮಾದಲ್ಲಿ ಸಿಕ್ಸ್‌ಪ್ಯಾಕ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

Leave a Reply

Your email address will not be published.