ಛತ್ತೀಸ್ ಗಢ್ : ಮಾವೋವಾದಿಗಳಿಂದ ಬಾಂಬ್ ದಾಳಿ : 9 CRPF ಯೋಧರ ಸಾವು

ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಸೇನೆಯ ವಾಹನವನ್ನು ಉಡಾಯಿಸಿದ ಪರಿಣಾಮವಾಗಿ ದಾಳಿಯಲ್ಲಿ 9 ಸಿಆರ್ ಪಿಎಫ್ ಯೋಧರು ಮೃತರಾಗಿದ್ದಾರೆ. ಅಲ್ಲದೇ ದಾಳಿಯಲ್ಲಿ ಸಿಆರ್ ಪಿಎಫ್ ಪಡೆಯ ನಾಲ್ವರು ಯೋಧರು ಗಾಯಗೊಂಡಿದ್ದಾರೆ.

11 ಜನರನ್ನು ಒಳಗೊಂಡ ಕೋಬ್ರಾ ಫೋರ್ಸ್ ಸಿಆರ್ ಪಿಎಫ್ ಪಡೆ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಮಾವೋವಾದಿಗಳು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಕಿಸ್ತಾರಾಮ್ ನಿಂದ ಪಲೋಡಿಗೆ ತೆರಳುವ ಮಾರ್ಗಮಧ್ಯೆ ವಾಹನವನ್ನು ಉಡಾಯಿಸಲಾಗಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯೋಧರನ್ನು ಕಳೆದುಕೊಂಡಿದ್ದಕ್ಕೆ ತೀವ್ರ ಯಾತನೆಯಾಗುತ್ತಿದೆ ಎಂದಿದ್ದಾರೆ. ಛತ್ತೀಸಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಸಿಆರ್ ಪಿಎಫ್ ಯೋಧರ ಸಾವಿನಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com