ಪ್ರತಿಭಾ ಕುಳಾಯಿಗೆ ಕಾಮುಕನ ಕಾಟ : ಅಟ್ಟಾಡಿಸಿ ಹೊಡೆದ ಸೂರತ್ಕಲ್‌ ಕಾರ್ಪೊರೇಟರ್‌

ಮಂಗಳೂರು : ಕೆಲ ತಿಂಗಳ ಹಿಂದಷ್ಟೇ ಸಾಯುವ ಮನಸ್ಸಿರುವವರು, ಕೆಲಸ ಮಾಡಲು ಇಷ್ಟವಿಲ್ಲದವರು ಸಂಘಪರಿವಾರಕ್ಕೆ ಸೇರಿಕೊಳ್ಳಿ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದ ಸೂರತ್ಕಲ್‌ನ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಈಗ ಮತ್ತೊಮ್ಮೆ ತಮ್ಮ ದಿಟ್ಟತನದಿಂದ ಸುದ್ದಿಯಾಗಿದ್ದಾರೆ.

ಮಂಗಳೂರು ಶಾಸಕ ಮೊಯಿನುದ್ದೀನ್‌ ಬಾವಾ ಅವರ ನಿವಾಸದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್‌ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಎಂಬಾತ ಪ್ರತಿಭಾ ಕುಳಾಯಿ ಅವರ ಕೈ ಹಿಡಿದಿದ್ದು ಆತನಿಗೆ ಥಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸತ್ತಾರ್‌, ಪ್ರತಿಭಾ ಅವರ ಕೈ ಹಿಡಿದ ಕೂಡಲೆ ಸಿಟ್ಟಿಗೆದ್ದ ಪ್ರತಿಭಾ ಆತನಿಗೆ ಅಟ್ಟಾಡಿಸಿ ಥಳಿಸಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಅಬ್ದುಲ್‌ ಸತ್ತಾರ್‌ ಈ ಹಿಂದೆ ಸಹ ಅನೇಕ ಮಹಿಳೆಯರಿಗೆ ಕಿರುಕುಳ ನೀಡಿದ್ದು, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆತನ ಕೈ ಕಡಿದಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಅನುಚಿತ ವರ್ತನೆ ತೋರಿದ್ದ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com